ಹೈ ಟೆನ್ಷನ್ ವಿದ್ಯುತ್ ತಂತಿಗೆ ಟ್ರಾಕ್ಟರ್ ತಗುಲಿ ಆಪರೇಟರ್ ಸಾವು: ಸಹಾಯಕನಿಗೆ ಗಂಭೀರ ಗಾಯ
1 min readಮೈಸೂರು: ಹೈಟೆನ್ಷನ್ ವಿದ್ಯುತ್ ತಂತಿಗೆ ಮೋಟಾರ್ ರಿಪೇರಿ ಟ್ರ್ಯಾಕ್ಟರ್ ತಗುಲಿ ಆಪರೇಟರ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಸಹಾಯಕ ಗಂಭೀರವಾಗಿ ಗಾಯಗೊಂಡ ಘಟನೆ ನಂಜನಗೂಡು ತಾಲೂಕಿನ ಕಿರುಗುಂದ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗರಾಜು ಎಂಬುವರ ಜಮೀನಿನಲ್ಲಿ ದುರಂತ ನಡೆದಿದೆ.ತಗಡೂರು ಗ್ರಾಮದ ಮೋಟಾರ್ ರಿಪೇರಿ ಆಪರೇಟರ್ ಲೋಕೇಶ್(30) ಸ್ಥಳದಲ್ಲೇ ಮೃತಪಟ್ಟರೆ ಸಹಾಯಕ ಮುದ್ದುಮಾದೇಗೌಡ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗ್ರಾಮದ ನಾಗರಾಜು ಎಂಬುವರು ತಮ್ಮ ಜಮೀನಿಗೆ ಹೊಸದಾಗಿ ಮೋಟರ್ ಅಳವಡಿಸುತ್ತಿದ್ದರು. ಈ ಸಂಧರ್ಭದಲ್ಲಿ ಟ್ರಾಕ್ಟರ್ ನ ಒಂದು ಭಾಗ ಹೈಟೆನ್ಷನ್ ತಂತಿಗೆ ಸಂಪರ್ಕ ಸಾಧಿಸಿದೆ. ಸ್ಥಳದಲ್ಲೇ ಆಪರೇಟರ್ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ನಂಜನಗೂಡಿನ ಡಿವೈಎಸ್ಪಿ ಗೋವಿಂದರಾಜ್ ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ಬಿಳಿಗೆರೆ ಠಾಣೆ ಪಿಎಸ್ಸೈ ಆರತಿ ಭೇಟಿ ನೀಡಿದ್ದಾರೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.