ಎಚ್ಚರ ಪ್ರತಿಯೊಬ್ಬರಿಗೂ ಓಮಿಕ್ರಾನ್‌ ಹರಡುತ್ತಂತೆ!

1 min read

ಕೋವಿಡ್ ನ ರೂಪಾಂತರಿ ಓಮಿಕ್ರಾನ್ ವೈರಸ್ ಪ್ರತಿಯೊಬ್ಬರಿಗೂ ಹರಡುತ್ತದೆ ಎಂಬ ಆತಂಕಕಾರಿ ವಿಚಾರ ಇದೀಗ ತಿಳಿದುಬಂದಿದೆ. ಎರಡು ಡೋಸ್ ಲಸಿಕೆ ಪಡೆದು ಬೂಸ್ಟರ್ ಡೋಸ್ ಪಡೆದುಕೊಂಡರೂ ಪ್ರತಿಯೊಬ್ಬರಿಗೂ ಈ ಸೋಂಕು ತಗುಲುವ ಸಾಧ್ಯತೆ ಇದೆಯಂತೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಡಾ.ಜಯಪ್ರಕಾಶ್‌ ಮುಲಿಯಿಲ್ ಅವರು, ಕೊರೊನಾ ರೂಪಾಂತರಿ ಓಮಿಕ್ರಾನ್‌ ಸೋಂಕನ್ನು ನಿಯಂತ್ರಿಸುವುದು ಅಸಾಧ್ಯ. ವ್ಯಾಪಕವಾಗಿ ಹರಡುತ್ತಿರುವ ಈ ಸೋಂಕನ್ನು ನಿಯಂತ್ರಿಸಲು ಬೂಸ್ಟರ್‌ ಡೋಸ್‌ನಿಂದಲೂ ಸಾಧ್ಯವಿಲ್ಲ. ಯಾವುದೇ ವ್ಯತ್ಯಾಸವಿಲ್ಲದೇ, ವಿಶ್ವದ ಎಲ್ಲಾ ದೇಶಗಳಲ್ಲೂ ಓಮಿಕ್ರಾನ್‌ ತೀವ್ರಗತಿಯಲ್ಲಿ ಹರಡಲಿದೆ ಎಂದು ಹೇಳಿದ್ದಾರೆ.


ಇನ್ನು ಮುಂದೆ ಕೋವಿಡ್‌ ಭಯಾನಕ ರೋಗವಾಗಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ಹೊಸ ತಳಿ ತನ್ನ ಪರಿಣಾಮದಲ್ಲಿ ಸೌಮ್ಯವಾಗಿದೆ. ಈ ಸೋಂಕಿಗೆ ತುತ್ತಾದವರಲ್ಲಿ ಕಡಿಮೆ ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನಾವು ನಿಭಾಯಿಸಬಲ್ಲ ಕಾಯಿಲೆ ಇದಾಗಿದೆ. ಇದು ಡೆಲ್ಟಾಗಿಂತ ಹೆಚ್ಚು ಸೌಮ್ಯವಾಗಿದೆ. ಈ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವೈರಸ್‌ ಕೇವಲ ಎರಡು ದಿನಗಳಲ್ಲಿ ಸೋಂಕನ್ನು ದ್ವಿಗುಣಗೊಳಿಸುತ್ತದೆ. ಪರೀಕ್ಷಿಸಿ ಸೋಂಕನ್ನು ದೃಢಪಡಿಸುವ ಮೊದಲೇ ಸೋಂಕಿತ ಹೆಚ್ಚಿನ ಸಂಖ್ಯೆಯ ಜನರಿಗೆ ಅದನ್ನು ಹರಡಿರುತ್ತಾನೆ. ಈ ರೀತಿಯ ಸಾಂಕ್ರಾಮಿಕ ವಿಕಾಸದಲ್ಲಿ ನೀವು ಯಾವುದೇ ವ್ಯತ್ಯಾಸ ಕಾಣಲು ಸಾಧ್ಯವಿಲ್ಲ ಎಂದಿದ್ದಾರೆ.

About Author

Leave a Reply

Your email address will not be published. Required fields are marked *