ಕನ್ನಡ ಚಿತ್ರರಂಗಕ್ಕೆ ನಂಬರ್ ’17’ ಶಾಪವಾಯ್ತಾ!?
1 min readಸ್ಪೆಷಲ್ ಸ್ಟೋರಿ : ಕರೋನಾದ ವೇಳೆ ಕನ್ನಡ ಸ್ಯಾಂಡಲ್‌ವುಡ್‌ಗೆ ಕರಾಳ ವರ್ಷ ಎಂದರು ತಪ್ಪಿಲ್ಲ. ಇದಕ್ಕೆ ಕಾರಣ ಮೂವರು ಸ್ಟಾರ್ ನಟರನ್ನ ಕನ್ನಡದ ಚಿತ್ರರಂಗ ಕಳೆದುಕೊಂಡದ್ದು. ಈ ಈ ನಡುವೆ ಇದೀಗಾ ಈ 17 ಎಂಬ ದಿನಾಂಕ ಎಲ್ಲರಿಗು ಬೇಸರ ಹಾಗೂ ಶಾಪ ಎನ್ನುವಂತೆ ಮೂಡಿಸಿದೆ ಅರೆ ಇದ್ಯಾಕೆ ಅಂದ್ರ ಇದು ಮೂವರು ಸ್ಟಾರ್ ನಟರ ಹುಟ್ಟಿದ ದಿನಾಂಕ. ಆದರೆ ಮೂವರು ಕೂಡ ಇದೇ ದಿನಾಂಕದಲ್ಲಿ ಹುಟ್ಟಿದ್ದು ಮೂವರು ಕೂಡ ಅಲ್ಪಾವಧಿಯಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಹೌದು, ಕನ್ನಡ ಚಿತ್ರಗಂಗಕ್ಕೆ ಇದೀಗಾ ಬ್ಯಾಕ್ ಟೂ ಬ್ಯಾಕ್ ಹೊಡೆತ ಬೀಳುತ್ತಿದೆ. ಚಿತ್ರರಂಗದಲ್ಲಿ ಹೊಸ ಆಶಾಕಿರಣ ಮೂಡಿಸಿದ್ದ ನಟರು ಇದೀಗಾ ಸಾಲಾಗಿ ದೇವರ ಮನೆ ಸೇರುತ್ತಿದ್ದಾರೆ. ಇದು ಎಲ್ಲರಿಗು ಬೇಸರ ಹಾಗೂ ನೋವುಂಟು ಮಾಡಿದೆ.
ಈಗಾಗಲೇ ಮೃತಪಟ್ಟ, ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್, ಪುನೀತ್ ರಾಜಕುಮಾರ ಅವರ ಮೂವರ ದಿನಾಂಕ ಇದೀಗಾ ಸಾಕಷ್ಟು ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಮೂವರ ದಿನಾಂಕವು ಒಂದೇಯಾಗಿರೋದು.
- ಈ ಮೂವರ ಹುಟ್ಟಿದ ದಿನಾಂಕ ಒಂದೇ ಆಗಿದ್ದು, 17 ಎಂಬ ಈ ದಿನಾಂಕವೇ ಈ ಮೂವರ ಜನ್ಮ ದಿನಾಂಕವಾಗಿದೆ. ಅ.17 ಚಿರು ಸರ್ಜಾ ಹುಟ್ಟುಹಬ್ಬವಾಗಿದ್ರೆ, ಜುಲೈ 17 ಸಂಚಾರಿ ವಿಜಯ್ ಹುಟ್ಟುಹಬ್ಬ ಹಾಗೂ ಮಾರ್ಚ್ 17 ಪುನೀತ್ ಅವರ ಹುಟ್ಟುಹಬ್ಬವಾಗಿದೆ.
ಈ ಮೂವರು ಒಂದೇ ದಿನಾಂಕದಲ್ಲಿ ಹುಟ್ಟಿದ್ದು, ಈ ಮೂವರು ತಮ್ಮ ಜೀವನ ಚದುರಂಗದ ಪಯಣವನ್ನ ಬಹುಬೇಗ ಮುಗಿಸಿ ಹೊರಟಿದ್ದಾರೆ.
ಕಳೆದ ವರ್ಷ ಚಿರಂಜೀವಿ ಸರ್ಜಾ ಮೃತಪಟ್ಟರು. ಚಿತ್ರರಂಗದ ಈ ನೋವು ಮಾಸುವ ಮುನ್ನವೇ ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ನಿಧನರಾದ್ರು. ಈ ನೋವಿನಲ್ಲಿದ್ದ ಅಭಿಮಾನಿಗಳಿಗೆ ನಿನ್ನೆ ಮತ್ತೊಂದು ಶಾಕ್ ಎಂಬಂತೆ ಪುನೀತ್ ರಾಜಕುಮಾರ್ ಮೃತಪಟ್ಟಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ತುಂಭಾಲಾರದ ನಷ್ಟವಾಗಿದ್ದು ಇಡೀ ಕನ್ನಡ ಚಿತ್ರರಂಗ ಹಾಗೂ ಮನೆ ಮನಗಳಲ್ಲಿ ಪುನೀತ್ ಅಗಲಿಕೆಯ ದುಖ ಕಾಡುತ್ತಿದೆ.