ಡಿಕೆಶಿ – ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ಗೊಂದಲ ಇಲ್ಲ: ಯತೀಂದ್ರ ಸಿದ್ದರಾಮಯ್ಯ
1 min readಮೈಸೂರು: ಮೈಸೂರಿನಲ್ಲಿ ತಂದೆಯ ಪರ ಬ್ಯಾಟ್ ಬೀಸಿದ ಡಾ.ಯತೀಂದ್ರ ಸಿದ್ದರಾಮಯ್ಯ. ಈಗಾಗಲೇ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಎಲ್ಲು ಕೂಡ ನಾನೇ ಸಿಎಂ ಆಗಬೇಕೆಂದು ಎಲ್ಲು ಹೇಳಿಲ್ಲ. ಇದನ್ನೆ ನಾಯಕರ ಮಧ್ಯೆ ಜಟಾಪಟಿ ಆಗ್ತಿದೆ ಎಂದು ಬಿಂಬಿಸೋದು ತಪ್ಪು ಅಂತ ಹೇಳಿದ್ದಾರೆ.
ಕೆಲವು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಸಕರು ಕೊಟ್ಟಿರೋ ಹೇಳಿಕೆಯಲ್ಲಿ ಏನು ತಪ್ಪಿಲ್ಲ. ಶಾಸಕರು ಎಷ್ಟೋ ಬಾರಿ ಎಲ್ಲ ಕಡೆ ವೈಯಕ್ತಿಕ ಅಭಿಪ್ರಾಯ ಹೇಳ್ತಾರೆ. ಆಯಾ ಪಕ್ಷದ ಅನುಯಾಯಿಗಳು ಅವರ ನಾಯಕರ ಬಗ್ಗೆ ಹೇಳಿಕೆ ಕೊಡ್ತಾರೆ. ಇದರಲ್ಲಿ ಯಾವುದೇ ತಪ್ಪೇನು ಇಲ್ಲ.
ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ಗೊಂದಲ ಇಲ್ಲ. ಇಬ್ಬರ ಮಧ್ಯೆಯು ಸಮನ್ವಯತೆ ಇದೆ. ಇಬ್ಬರು ಒಟ್ಟಾಗಿ ಕೂಡಿ ಪಕ್ಷವನ್ನ ಅಧಿಕಾರಕ್ಕೆ ತರುವಂತೆ ಕೆಲಸ ಮಾಡ್ತಾರೆ ಅಂತ ಮೈಸೂರಿನಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.