ನಿರಂತರವಾಗಿ 50 ದಿನಗಳಿಂದ 200ಕೂ ಹೆಚ್ಚು ಬೀದಿ ನಾಯಿಗಳಿಗೆ ಪೌಷ್ಠಿಕ ಆಹಾರ ನೀಡುತ್ತಾ ಬಂದಿದ್ದಾರೆ ಕೆಎಂಪಿಕೆ ಟ್ರಸ್ಟ್ ಸದಸ್ಯರು

1 min read

ಮೈಸೂರು: ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಪ್ರಾಣಿ ಪಕ್ಷಿಗಳ ಸಂರಕ್ಷಣಾ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರಾಗಿ ನೇಮಕಗೊಂಡ ದತ್ತ ಶ್ರೀ ಕೃಷ್ಣ ಮಿತ್ತಲ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಲಾಕ್ ಡೌನ್ ಹಿನ್ನೆಲೆಯಲ್ಲಿ ನಿರಂತರವಾಗಿ 50 ದಿನಗಳಿಂದ ಕೆಎಂಪಿಕೆ ಟ್ರಸ್ಟ್ ಸದಸ್ಯರು 200 ಕೂ ಹೆಚ್ಚು ಬೀದಿ ನಾಯಿಗಳಿಗೆ ಪೌಷ್ಠಿಕ ಆಹಾರ ನೀಡುತ್ತಾ ಬಂದಿದ್ದು ಇಂದು 50ನೇ ದಿನ. ಅದರ ಹಿನ್ನೆಲೆಯಲ್ಲಿ ನೂತನವಾಗಿ ನೇಮಕಗೊಂಡ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರಾಗಿ ಡಾ॥ ಶ್ರೀಕೃಷ್ಣ ಮಿತ್ತಲ್ ಅವರು ಮಹಾರಾಜ ಮೈದಾನದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಿ ಟ್ರಸ್ಟ್ ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಆನಂತರ ಇದೇ ಸಂಧರ್ಭದಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ಎಸ್.ಕೆ ಕೃಷ್ಣ ಮಿತ್ತಲ್ ರವರು ಮಾತನಾಡಿ ಕರ್ನಾಟಕದಲ್ಲಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಪಕ್ಷಿಗಳ ಸಂತತಿ ಕಾಪಾಡುವುದು ಮುಖ್ಯವಾಗಿರುತ್ತದೆ, ಅದರಂತೆಯೇ ನಗರಪ್ರದೇಶದಲ್ಲಿ ನಾಗರೀಕತೆಯೊಂದಿಗೆ ಹೊಂದುಕೊಂಡಿರುವ ಪ್ರಾಣಿಪಕ್ಷಿಗಳ ಹಿತವನ್ನು ಕಾಪಾಡುವುದು ನಾಗರೀಕರ ಕರ್ತವ್ಯ, ಎಲ್ಲವನ್ನು ಸರ್ಕಾರವೇ ನಿಭಾಯಿಸಲು ಅಸಾಧ್ಯ, ಪ್ರಾಣಿ ಪಕ್ಷಿ ಸೇವಾ ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಮುಖ್ಯವಾಗಿರುತ್ತದೆ, ಕೆಎಂಪಿಕೆ ಟ್ರಸ್ಟ್ ಲಾಕ್ ಡೌನ್ ಸಂಧರ್ಭದಲ್ಲಿ ತೊಂದರೆಯಲ್ಲಿರುವ ಬೀದಿನಾಯಿಗಳಿಗೆ ನಿರಂತರವಾಗಿ ಆಹಾರ ನೀಡುತ್ತಿರುವ ಕಾರ್ಯ ಶ್ಲಾಘನೀಯವಾದುದ್ದು ಎಂದರು.

ನಂತರ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಎಲ್. ಆರ್ ಮಹದೇವಸ್ವಾಮಿ ಮಾತನಾಡಿ ನಟ ದರ್ಶನ್ ರವರ ಸಂದೇಶದಂತೆ ಮೃಗಾಲಯದ ಪ್ರಾಣಿಪಕ್ಷಿಗಳ ನೆರವಿಗೆ ಸಾಕಷ್ಟು ಮಂದಿ ಕೋಟಿ ರೂ ಸೇರಿದಂತೆ ದತ್ತು ಸ್ವೀಕಾರ ತೆಗೆದುಕೊಂಡರು, ಅದರಂತೆಯೇ ನಗರ ಬಡಾವಣೆಗಳಲ್ಲಿ ಸಾಕುಪ್ರಾಣಿಗಳ ಮತ್ತು ಬೀದಿಪ್ರಾಣಿಗಳ ಆಹಾರ ಹಾರೈಕೆ ನಿರ್ವಹಣೆಗೆ ನಗರಪಾಲಿಕೆ ಯೋಜನೆ ರೂಪಿಸಿ ಪ್ರಾಣಿ ಸೇವಾ ಸಂಘವನ್ನು ಬಳಸಿಕೊಂಡು ಸಹಾಯಧನ ನೀಡಲು ಮುಂದಾಗಬೇಕಿದೆ ಎಂದರು.

ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ರವರು ಮಾತನಾಡಿ ಮೈಸೂರು ನಗರಾಭಿವೃದ್ಧಿ ಪ್ರಧಿಕಾರ ಮತ್ತು ನಗರಪಾಲಿಕೆಯೂ ವಲಯ ಮಟ್ಟದಲ್ಲಿ ವಾರ್ಡ್ ವಾರು ಪ್ರಾಣಿ ಪಕ್ಷಿಗಳ ಸೇವಾ ಸಂಘಗಳನ್ನ ಮತ್ತು ಸ್ವಯಂ ಸೇವಕರನ್ನ ಗುರುತಿಸಿ ಪ್ರಾಣಿಪಕ್ಷಿ ರಕ್ಷಣೆಗೆ ಆಹಾರ ಆರೋಗ್ಯ ತಪಾಸಣೆಗೆ ಮುಂದಾಗಬೇಕು, ಕೇವಲ ಬೀದಿನಾಯಿ ಹಸುಗಳನ್ನ ಕೋತಿಗಳನ್ನ ಹಿಡಿಯುವುದಕ್ಕೆ ತಂಡ ರಚಿಸಿದರೇ ಪ್ರಯೋಜನವಿಲ್ಲ ಇದರ ಕಡೆ ಸರ್ಕಾರ ಚಿಂತಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹದೇವ್ ಸ್ವಾಮಿ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ನವೀನ್ ಕುಮಾರ್, ಬಿಜೆಪಿ ಮೈಸೂರು ನಗರ ಹಿಂದುಳಿದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ರಾಕೇಶ್ ಕುಂಚಿಟಿಗ ,ನವೀನ್, ಚಂದ್ರು ,ಜೀವನ್ ,ಹಾಗೂ ಇನ್ನಿತರರು ಇದ್ದರು.

About Author

Leave a Reply

Your email address will not be published. Required fields are marked *