ಮೈಸೂರಲ್ಲಿ ಹೊಸ ಡೆಲ್ಟಾ ಪ್ಲಸ್ ಪತ್ತೆಯಾಗಿಲ್ಲ- ಅದು ಡೆಲ್ಟಾ ವೈರಸ್ ಮಾತ್ರ- DHO ಸ್ಪಷ್ಟನೆ!
1 min readಮೈಸೂರಿನಲ್ಲಿ ಡೆಲ್ಟಾ ಪ್ಲಸ್ ಹೆಚ್ಚಾಗಿದೆ ಎಂದು ಸಾಕಷ್ಟು ಸುದ್ದಿ ಹರಿದಾಡುತ್ತಿದ್ದು ಇದು ಅನಗತ್ಯ ಗೊಂದಲ ನಿರ್ಮಾಣವಾಗುವಂತೆ ಕೆಲವೊಂದು ಮಾಧ್ಯಮ ಬಿಂಬಿಸುತ್ತಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಕೇವಲ ಒಂದೇ ಒಂದು ಡೆಲ್ಟಾ ಪ್ಲಸ್ ವೈರಸ್ ಕಂಡು ಬಂದಿದ್ದು ಇದೀಗಾ ಮತ್ತೇ ಹೊಸ ಮೂರು ಪ್ರಕರಣ ದಾಖಲಾಗಿದೆ ಎಂದು ಅನಗತ್ಯ ಗೊಂದಲ ಮೂಡಿಸುತ್ತಿದ್ದಾರೆ. ಆದರೆ ಇದು ಡೆಲ್ಟಾ ಪ್ಲಸ್ ಅಲ್ಲ ಕೇವಲ ಡೆಲ್ಟಾ ವೈರಸ್ ಎಂದು ಆರೋಗ್ಯಾಧಿಕಾರಿ ಪ್ರಸಾದ್ ಅವರು ಸ್ಪಷ್ಟನೆ ನೀಡಿದ್ದಾರೆ.