ರಾಜ್ಯದಲ್ಲಿ ಮತ್ತಷ್ಟು ಅನ್ಲಾಕ್- ಚಿತ್ರಮಂದಿರಕ್ಕೆ ಶೇ.50ರಷ್ಟು ಅನುಮತಿ!
1 min readರಾಜ್ಯ ಸರ್ಕಾರ ಕೋವಿಡ್ ನಿಯಮವನ್ನ ಮತ್ತಷ್ಟು ಸಡಿಲಿಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಅನ್ಲಾಕ್ ಭಾಗ್ಯ ಕಲ್ಪಿಸಿದೆ. ಚಿತ್ರಮಂದಿರಗಳಲ್ಲಿ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದ್ದು ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಲು ಸೂಚಿಸಲಾಗಿದೆ.
ಈ ನಡುವೆ ಈಜುಕೊಳಕ್ಕೆ ಇನ್ನು ನಿರ್ಬಂಧ ಇದ್ದು, ಜುಲೈ 29 ರಿಂದ ಪದವಿ ಕಾಲೇಜುಗಳ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಆದರೆ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ವಾಕ್ಸಿನ್ ಪಡೆಯಬೇಕೆಂದು ತಾಕೀತು ಮಾಡಲಾಗಿದೆ.
ಇನ್ನು ದೇವಾಲಯಗಳಲ್ಲಿ ಕೋವಿಡ್ ನಿಯಮ ಅನುಸಾರ ಪೂಜೆ ಪುರಸ್ಕಾರಕ್ಕೆ ಅನುಮತಿ ನೀಡಲಾಗಿದ್ದು, ನಾಳೆಯಿಂದಲೇ ರಾಜ್ಯದಲ್ಲಿ ನೈಟ್ ಕರ್ಪ್ಯೂ ಅವಧಿ ಬದಲಾವಣೆ ಮಾಡಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕರ್ಪ್ಯೂ ಜಾರಿ ಮಾಡಿ ಆದೇಶ ಮಾಡಲಾಗಿದೆ.