ಕೊಡವ ಸಮುದಾಯದ ಹೊಸ ರೂಲ್ಸ್‌ಗೆ ಬೆಚ್ಚಿದ ಜನರು- ಎಲ್ಲೆಡೆ ಆಕ್ರೋಶ!
1 min readಕೊಡವ ಜನರ ಆಚಾರ ವಿಚಾರ ಕೊಂಚ ವಿಭಿನ್ನ ವಿಶೇಷವೇ ಹೌದು. ಅವರ ವಿಶೇಷ ಆಚರಣೆ ಹಾಗೂ ಕಾರ್ಯಕ್ರಮ ನೋಡುಗರಿಗೆ ಒಂದು ವಿಶೇಷ ಎನಿಸುತ್ತದೆ. ಆದರೆ ಇದೀಗಾ ಕೊಡವರ ಕೆಲ ಸಂಪ್ರದಾಯಕ್ಕೆ ಷರತ್ತು ಹಾಕಲಾಗ್ತಿದೆ ಎಂಬ ಮಾಹಿತಿಗಳು ಹರಿದಾಡುತ್ತಿದೆ.
ಅದರಲ್ಲಿ ಕೊಡವ ಜನರ ಮದುವೆ ಸಂಪ್ರದಾಯಕ್ಕೆ ಕೆಲವು ಷರತ್ತು ವಿಧಿಸಿದ್ದು, ಇದು ಕೊಡವ ಸಮುದಾಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಚ್ಚರಿ ಆದರು ಇದು ಸತ್ಯ. ಕೊಡಗಿನಲ್ಲಿ ಮದ್ಯ ಸೇವನೆ ಮಾಮೂಲು. ಅದೇ ರೀತಿ ಮದುವೆಗಳಲ್ಲಿಯೂ ಶ್ಯಾಂಪೇನ್ ಹಾರಿಸುವುದು ಎಂದರೆ ಕೆಲವರಿಗೆ ಬಲು ಇಷ್ಟ, ಇದು ಇಲ್ಲದೆಯೇ ಮದುವೆಗೆ ಬೆಲೆಯೇ ಇಲ್ಲ ಎನ್ನುವುದು ಕೆಲವರ ಅನಿಸಿಕೆ.
ಆದರೆ ಭಾರತೀಯ ಸಂಪ್ರದಾಯ ಬಿಟ್ಟು ಬ್ರಿಟಿಷ್ ಸಂಪ್ರದಾಯವನ್ನು ನಾವು ಅಳವಡಿಸಿಕೊಳ್ಳುವುದು ಸರಿಯಲ್ಲ ಎಂದಿರುವ ಸಮುದಾಯದ ಮುಖ್ಯಸ್ಥರು ಇದೀಗ ಎಲ್ಲದ್ದಕ್ಕೂ ಬ್ರೇಕ್ ಹಾಕಿ ರೂಲ್ಸ್ ಮಾಡಿದ್ದಾರೆ.
ಇನ್ನು ಮದುಮಗಳ ವಿಷಯಕ್ಕೆ ಬರುವುದಾದರೆ, ಈಕೆಗೆ ಆಶಿರ್ವದಿಸಲು ಬರುವ ಮಹಿಳೆಯರು ಬಿಚ್ಚು ತಲೆಯಲ್ಲಿ ಅಂದರೆ ಕೂದಲು ಬಿಟ್ಟು ಬರುವಂತಿಲ್ಲ. ಕೂದಲು ಬಿಡುವುದು ಅಶುಭದ ಸಂಕೇತ, ಆದ್ದರಿಂದ ಸರಿಯಾಗಿ ಕೂದಲು ಕಟ್ಟಿಕೊಂಡು ಬಂದವರಷ್ಟೇ ಆಶೀರ್ವಾದ ಮಾಡಬಹುದು ಎಂದು ಕೊಡವ ಮುಖಂಡ ಎಂ. ಬಿ ದೇವಯ್ಯ ಹೇಳಿದ್ದಾರೆ.
ಇದು ಕೊಡವ ಸಮಾಜದಲ್ಲೀಗ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆದರೆ ಈ ಹೊಸ ಆದೇಶಕ್ಕೆ ಸಾಕಷ್ಟು ಪರ ವಿರೋಧದ ಮಾತುಗಳು ಕೇಳಿ ಬರುತ್ತಿದ್ದು ಸಖತ್ ಚರ್ಚೆ ಆಗ್ತಿದೆ.