ಇಂದಿನಿಂದ ಜೂನ್ 7ರ ವರೆಗೆ ಲಾಕ್ಡೌನ್: ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ತಪಾಸಣೆ
1 min readಮೈಸೂರು: ಇಂದಿನಿಂದ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ(ಜೂನ್ 7ರ ವರೆಗೆ) ಆಗಿದ್ದು, ಜನರ ಓಡಾಟ, ವಾಹನ ಸಂಚಾರ ಮಾಡದಂತೆ ಟಫ್ ರೂಲ್ಸ್ ಜಾರಿ ಮಾಡಲಾಗಿದೆ.
ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ತಪಾಸಣೆ ನಡೆಯುತ್ತಿದ್ದು, ಬ್ಯಾರಿಕೇಡ್ ಅಳವಡಿಸಿ ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಮನೆಯಿಂದ ಹೊರ ಬಂದ್ರೆ ವಾಹನ ಸೀಜ್, ಬೀಳುತ್ತೆ ಕೇಸ್ ಅಂತ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಗತ್ಯ ಸೇವೆ ಸಮಯವನ್ನೇ ಲಾಭ ಮಾಡಿಕೊಂಡಿರುವ ಜನ ಎಂದಿನಂತೆ ವಾಹನ ಸಂಚಾರ ನಡೆಸುತ್ತಿದ್ದಾರೆ. ನಗರದ ಸಯ್ಯಾಜೀರಾವ್ ರಸ್ತೆ, ಅರಸು ರಸ್ತೆ, ದೇವರಾಜ ಮಾರುಕಟ್ಟೆ ಸುತ್ತಮುತ್ತ ಜನ ಜಂಗುಳಿ ಉಂಟಾಗಿದೆ. ಸಾರ್ವಜನಿಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
ಇನ್ನು ನೆಪ ಹೇಳಿಕೊಂಡು ಹೊರ ಬರುತ್ತಿರುವ ಜನರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಮುಂದಿನ ಹದಿನಾಲ್ಕು ದಿನ ಟಫ್ ರೂಲ್ಸ್. ರೂಲ್ಸ್ ಬ್ರೇಕ್ ಮಾಡೋ ಪ್ರಯತ್ನ ಮಾಡಿದ್ರೆ ಈ ಬಾರಿ ನೋ ಎಕ್ಸ್ಕ್ಯೂಸ್ ಎಂದಿದ್ದಾರೆ.