KR ಆಸ್ಪತ್ರೆಯ ಕೊರೋನಾ ವಾರ್ಡ್’ಗಳಲ್ಲಿ ಅವ್ಯವಸ್ಥೆ: ಡಿಸಿ ಬಳಿ ಕಣ್ಣಿರಾಕಿ ಬೇಸರ ಹೊರಹಾಕಿದ ಮಹಿಳೆ
1 min readಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆಯ ಕೊರೋನಾ ವಾರ್ಡ್ ಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಗಮನಕ್ಕೆ ರೋಗಿಗಳ ಸಂಬಂಧಿಕರು ತಂದಿದ್ದಾರೆ.
ಮೆಡಿಸಿನ್ ಇಲ್ಲ, ವಾರ್ಡ್ ಗಳಲ್ಲಿ ಸ್ವಚ್ಚತೆ ಇಲ್ಲ. ಸೆಕ್ಯೂರಿಟಿಗಳು ಸೌಜನ್ಯವಾಗಿ ವರ್ತಿಸಲ್ಲ ಎಂದು ದೂರು ನೀಡಿದರು. ಎಲ್ಲರ ದೂರು ಆಲಿಸಿದ ಡಿಸಿ ರೋಹಿಣಿ ಸಿಂಧೂರಿ ತಕ್ಷಣವೇ ಕಂಪ್ಲೇಂಟ್ ಬಾಕ್ಸ್ ಆರಂಭಿಸಿ. ಪ್ರತಿ ರೋಗಿ ಸಂಬಂಧಿಯ ದೂರು ಅಲ್ಲಿ ದಾಖಲಾಗಲಿ. ಎಲ್ಲ ದೂರನ್ನು ನಾನೇ ಪ್ರತಿ ದಿನ ಸಂಜೆ ಪರಿಶೀಲಿಸುತ್ತೇನೆ ಎಂದರು.
ನೀವೂ ಒಂದು ಹೆಣ್ಣಾಗಿ ಇಷ್ಟೊಂದು ಸೇವೆ ಮಾಡ್ತಿದ್ದೀರಾ. ನಿಮಗೆ ನಮ್ಮ ಧನ್ಯವಾದಗಳು, ಆದರೆ ಈ ಸಮಸ್ಯೆ ಬಗೆಹರಿಸಿ. ನಮಗೆ ನರ್ಸ್ ಕರೆ ಮಾಡಿ ಕೆಟ್ಟದಾಗಿ ಬೈತಾರೆ ಎಂದು ಮಹಿಳೆಯೊಬ್ಬರು ಡಿಸಿ ಬಳಿ ಕಣ್ಣಿರಾಕಿ ಬೇಸರ ಹೊರಹಾಕಿ ನೋವು ತೋಡಿಕೊಂಡರು. ಈ ವೇಳೆ ಮಹಿಳೆಗೆ ಸಾಂತ್ವನ ಹೇಳಿ ಅಧಿಕಾರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.