September 9, 2024

ಶಂಖ ಜಾಗಟೆ ಬಾರಿಸುವ ಮೂಲಕ ವಾಹನ ಚಾಲಕರಿಗೆ ವಿಭಿನ್ನವಾಗಿ ಜಾಗೃತಿ

1 min read

ಮೈಸೂರು: ಇಂದು ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಜಾಗಟೆ ಬಾರಿಸಿ ಮತ್ತು ಶಂಖ ಊದುವ ಮುಖಾಂತರ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುತ್ತಿರುವವರಿಗೆ ಮನೆಯಲ್ಲೇ ಇರಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಟೆರೆಷಿಯನ್ ಕಾಲೇಜು ವೃತ್ತದಲ್ಲಿ ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್ ರವರು, ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ, ಹಾಗೂ ಧನರಾಜ್, ಉಪಾಧ್ಯಕ್ಷರಾದ ಸ್ವರೂಪ್ ಗೌಡ , ನವೀನ್ ಬಲರಾಮ್, ಮುಂತಾದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *