ರಾಷ್ಟ್ರೀಯ ಸಹಕಾರ ಸಮ್ಮೇಳನ: ಅಮಿತ್ ಶಾರನ್ನು ಅಭಿನಂದಿಸಿದ ಸಚಿವ ಎಸ್.ಟಿ.ಸೋಮಶೇಖರ್
1 min readನವದೆಹಲಿ,ಸೆ.25-ಇಲ್ಲಿನ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಹಕಾರ ಸಮ್ಮೇಳನದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರ ಜೊತೆ ಕರ್ನಾಟಕ ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭಾಗವಹಿಸಿದ್ದರು.
ಸಮ್ಮೇಳನದಲ್ಲಿ ಭಾಗವಹಿಸಿದ ಸಚಿವ ಎಸ್.ಟಿ. ಸೋಮಶೇಖರ್ ಅವರು ಅಮಿತ್ ಶಾ ರವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದರು. ಮನವಿ ಸಲ್ಲಿಸಿದ ವಿವರಗಳು ಇಂತಿವೆ. ಕರ್ನಾಟಕ ಸಹಕಾರ ಸಮ್ಮೇಳನ ಕಾರ್ಯಕ್ರಮಕ್ಕೆ ಆಗಮಿಸಿಸಬೇಕೆಂದು ಆಹ್ವಾನಿಸಿದರು.
ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಸಹಕಾರ ಸಚಿವಾಲಯ ರಚನೆ ಮಾಡಿದ ನಿರ್ಧಾರ ಐತಿಹಾಸಿಕವಾದದ್ದು. ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡ ನಿಮಗೆ ನನ್ನ ಹಾಗೂ ಕರ್ನಾಟಕದ ಜನತೆ ಮತ್ತು ಕೋಆಪರೇಟಿವ್ ಸೊಸೈಟಿ ಸದಸ್ಯರ ಪರವಾಗಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ನೂತನ ಸಚಿವಾಲಯದ ರಚನೆಯಿಂದ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲ ಬಂದಂತಾಗಲಿದೆ ಮಾತ್ರವಲ್ಲದೆ ಸ್ಪರ್ಧೆಗಿಳಿಯಲು ಪ್ರೇರೇಪಿಸಿದಂತಾಗಲಿದೆ. ಸಹಕಾರ ಇಲಾಖೆಯಲ್ಲಿ ಕೆಳ ಹಂತದಿಂದ ಎಲ್ಲಾ ವರ್ಗದವರಿಗೆ ಆತ್ಮಸ್ಥೈರ್ಯ ಕೂಡ ಸಿಕ್ಕಂತಾಗಲಿದೆ.
ಸಹಕಾರ್ ಸೇ ಸಮೃದ್ಧಿ’* ಧ್ಯೇಯವಾಕ್ಯದೊಂದಿಗೆ ರಚನೆಯಾಗಿರುವ ಸಹಕಾರ ಸಚಿವಾಲಯದಿಂದ, ಆಡಳಿತಕ್ಕೆ ಹೊಸ ರೂಪ ಸಿಗಲಿದೆ ಹಾಗೂ ಕಾನೂನು ಮತ್ತು ನೀಸೋಮಶ ಚೌಕಟ್ಟು ಸಿಗುವುದರಿಂದ ಸಹಕಾರ ಚಳವಳಿಯಿಂದ ಹುಟ್ಟು ಪಡೆದ ಸಹಕಾರ ಇಲಾಖೆಯನ್ನು ಮತ್ತಷ್ಟು ಬಲಪಡಿಸಿದಂತಾಗಲಿದೆಎಂದರು.
ಸಹಕಾರ ಚಳವಳಿಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಮತ್ತು ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕಂಡಿದ್ದ ಕನಸುಗಳನ್ನು ನೂತನ ಸಹಕಾರ ಸಚಿವಾಲಯ ನನಸು ಮಾಡಲಿದೆ. ದೇಶದ ಜನತೆ ಆರ್ಥಿಕವಾಗಿ ಸಶಕ್ತರಾಗಲು ಸಹಕಾರ ಚಳವಳಿ ತಳಹದಿಯಾಗಿದ್ದು ಇದೀಗ ಅದರ ಆಶೋತ್ತರಗಳನ್ನು ಈಡೇರಿಸಲು ಸಹಕಾರ ಸಚಿವಾಲಯ ನೆರವಾಗಲಿದೆ ಎಂದು ಹೇಳಿದರು.
ಬಹುರಾಜ್ಯ ಸಹಕಾರ ಸಂಸ್ಥೆಗಳ ಅಭಿವೃದ್ಧಿ ಕಾರ್ಯಗಳನ್ನು ಉತ್ತೇಜಿಸಲು ಹಾಗೂ ವ್ಯವಹಾರೀಕರಣವನ್ನು ಸರಳೀಕರಣಗೊಳಿಸಲು ನೂತನ ಸಚಿವಾಲಯವು ನೆರವಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಸಮುದಾಯ ಆಧಾರಿತ ಅಭಿವೃದ್ಧಿ ಸಹಭಾಗಿತ್ವಕ್ಕೆ ಸಹಕಾರ ಸಚಿವಾಲಯ ರಚನೆ ಮಾಡುವ ಸಂಬಂಧ ಹಣಕಾಸು ಸಚಿವರು ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಘೋಷಣೆ ಮಾಡಿದ್ದನ್ನು ಈಡೇರಿಸಲಾಗಿದೆ. ಇದು ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸಲಿದೆ ಮತ್ತು ಬಹುರಾಜ್ಯ ಸಹಕಾರ ಸಂಸ್ಥೆಗಳ ಭಾಂದವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.