ನಂಜುಂಡನಿಗೆ ಹರಿದು ಬಂತು ಕಾಣಿಕೆಯ ಮಹಾಪೂರ!

1 min read

ಮೈಸೂರು – ನಂಜನಗೂಡು : ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು. 2,15,80,467/- (ಎರಡು ಕೋಟಿ ಹದಿನೈದು ಲಕ್ಷ ಎಂಭತ್ತು ಸಾವಿರದ ನಾಲ್ಕುನೂರ ಅರವತ್ತೇಳು ರೂ) ಹಣ ಸಂಗ್ರಹವಾಗಿದೆ.

21 ಹುಂಡಿಗಳ ಎಣಿಕೆಯಲ್ಲಿ ಸಂಗ್ರಹ ಎರಡು ಕೋಟಿ ದಾಟಿದೆ. ಕಳೆದ ತಿಂಗಳ ಸಂಗ್ರಹಕ್ಕೆ ಹೋಲಿಸಿದರೆ ಈ ಬಾರಿ 57 ಲಕ್ಷ ಹಣ ಹೆಚ್ಚುವರಿಯಾಗಿ ಸಂಗ್ರಹವಾಗಿದೆ. ಕೊರೊನಾ ಮುಕ್ತವಾದ ನಂತರ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆ ಹುಂಡಿ ಕಾಣಿಕೆಯಲ್ಲೂ ಹೆಚ್ಚು ಹಣ ಸಂಗ್ರಹವಾಗಿದೆ.

ಈ ಬಾರಿಯೂ ಭಕ್ತರು ನಿಷೇಧಿತ ನೋಟುಗಳನ್ನ ಕಾಣಿಕೆಯಾಗಿ ನಂಜುಂಡನಿಗೆ ಕಾಣಿಕೆಯಾಗಿ ನೀಡಿದ್ದಾರೆ. ಒಟ್ಟು 42 ಸಾವಿರ ಮೌಲ್ಯದ ನಿಷೇಧಿತ ನೋಟುಗಳು ಸಂಗ್ರಹವಾಗಿದೆ. ವಿದೇಶಿ ಭಕ್ತರೂ ಸಹ ನಂಜುಂಡನಿಗೆ ಕಾಣಿಕೆ ಅರ್ಪಿಸಿದ್ದಾರೆ. 29 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.

108 ಗ್ರಾಂ ಚಿನ್ನ ಹಾಗೂ 5 ಕೆಜಿ 750 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಬ್ಯಾಂಕ್ ಸಿಬ್ಬಂದಿಗಳು ಸೇರಿದಂತೆ ಸುಮಾರು 40 ಕ್ಕೇ ಹೆಚ್ಚು ಮಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

About Author

Leave a Reply

Your email address will not be published. Required fields are marked *