ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜನ್ಮ ದಿನ.!

1 min read

ಕರ್ನಾಟಕ ಸೇನಾ ಪಡೆ ವತಿಯಿಂದ ಇಂದು ಮೈಸೂರು ಅರಮನೆ ದಕ್ಷಿಣ ದ್ವಾರದ ಮುಂಭಾಗ ಆಯೋಜಿಸಿದ್ದ ಮೈಸೂರಿನ ಪ್ರಸಿದ್ಧ ಅರಸರು ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139 ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ ಮೈಸೂರು ಖ್ಯಾತಿಯ ಮೈಸೂರು ಪಾಕ್ ಅನ್ನು ವಿತರಣೆ ಮಾಡುವ ಮೂಲಕ ಹಾಗೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತರಾದ ಶ್ರೀ ಮುತ್ತುರಾಜ್ ಎಂ ರವರು ನೆರವೇರಿಸಿದರು.

ನಂತರ ಮೈಸೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಡಿ ಟಿ ಪ್ರಕಾಶ್ ರವರು ಮಾತನಾಡಿ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಮಹಾನ್ ರಾಜ ಋಷಿ ನಾಲ್ವಡಿರವರು. ನಾಲ್ವಡಿರವರು ಕೊಡುಗೆ ನೀಡದ ಕ್ಷೇತ್ರಗಳೇ ಇಲ್ಲ. ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್, ಶಿಕ್ಷಣ, ಆರೋಗ್ಯ, ಸಮಾನತೆ ಸೇರಿದಂತೆ ಸೇರಿದಂತೆ ಅಂದು ಮೈಸೂರು ಬೆಂಗಳೂರು ಆಕರ್ಷಣೀಯ ಕೇಂದ್ರವಾಗುವಂತೆ ಮಾಡಿದ್ದು ನಾಲ್ವಡಿದವರು. ಬಾಲಕನಾಗಿರುವಾಗಲೇ ಸಿಂಹಾಸನ ಏರಿದ ನಾಲ್ವಡಿರವರು ಹತ್ತನೇ ಚಾಮರಾಜ ಒಡೆಯರ್ ಹಾಗೂ ತಾಯಿ ವಾಣಿವಿಲಾಸ ಸನ್ನಿಧಾನ ಕೆಂಪನಂಜಯಾಣ್ಣಿ ಮಗನಾಗಿ ಜೂನ್ 04 1884 ರಲ್ಲಿ ಜನಿಸಿ ಆಗಲೇ ಪ್ರಜಾಪ್ರತಿನಿಧಿ ಸಭೆಯನ್ನು ಜಾರಿಗೆ ತಂದರು. ಶಿಕ್ಷಣಕ್ಕೆ ಹೆಚ್ಚು ಒತ್ತುವರಿಯನ್ನು ಕೊಟ್ಟು 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದವರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ತೆರೆದರು ಎಂದರು.

ನಂತರ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ನಾಲ್ವಡಿ ರವರು ರಾಜ್ಯದ ನಾನಾ ಭಾಗಗಳಲ್ಲಿ 270ಕ್ಕೂ ಹೆಚ್ಚು ಉಚಿತ ಆಸ್ಪತ್ರೆಗಳನ್ನು ಪ್ರಾರಂಭಿಸಿದರು, ಜೊತೆಗೆ ಮೈಸೂರು ಬೆಂಗಳೂರು ನಗರಗಳಲ್ಲಿ ವಿಶಾಲವಾದ ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನಗಳು, ಶ್ರೇಷ್ಠ ವಿದ್ಯಾಸಂಸ್ಥೆಗಳು, ಅನಾಥಾಲಯಗಳನ್ನು ನಿರ್ಮಾಣ ಮಾಡಿದರು. ನಾಲ್ವಡಿ ಅವರ ಆಡಳಿತ ಅವಧಿಯ ವರ್ಷಗಳನ್ನು ಮೈಸೂರಿನ ” ಸುವರ್ಣ ಯುಗ ” ಎಂದರೆ ತಪ್ಪಾಗಲಾರದು. ಇಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕನ್ನಡಿಗರ ಮನಸ್ಸಲ್ಲಿ ಎಂದೆಂದಿಗೂ ಅಜರಾಮರವಾಗಿ ಉಳಿದಿದ್ದಾರೆ

ಕನ್ನಡಿಗರು ಬೆಳಗೆದ್ದು ನೆನೆಯಲೇಬೇಕಾದ ಮಹನೀಯರಲ್ಲಿ, ಪ್ರಾಂತ ಸ್ಮರಣೀಯರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಿಗರು. ಆಧುನಿಕ ಮೈಸೂರು ನಿರ್ಮಾಣ, ಅಭಿವೃದ್ಧಿಗೆ ನಾಲ್ವಡಿ ರವರ ಕೊಡುಗೆ ಅಪಾರ. ಕೇಂದ್ರ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಈ ಕೂಡಲೇ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ ಹಾಗೂ ರಾಜ್ಯ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಯನ್ನು ಸರ್ಕಾರಿ ರಜೆ ಘೋಷಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ ಜಿ ಗಂಗಾಧರ್ ರವರ ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ ಮೈಸೂರು ಖ್ಯಾತಿಯ ಮೈಸೂರು ಪಾಕ್ ಅನ್ನು ವಿತರಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಅರಮನೆ ಮಂಡಳಿ ಉಪ ನಿರ್ದೇಶಕರಾದ ಶ್ರೀ ಟಿ ಎಸ್ ಸುಬ್ರಹ್ಮಣ್ಯ, ಜೂ. ವಿಷ್ಣುವರ್ಧನ್, ಸುರೇಶ್ ಗೋಲ್ಡ್, ಡಾ.ಶಾಂತರಾಜೇ ಅರಸ್, ಪ್ರಭುಶಂಕರ, ಸಿ ಎಚ್ ಕೃಷ್ಣಯ್ಯ, ಪ್ರಭಾಕರ, ಅಂಬಾ ಅರಸ್, ವಿಜಯೇಂದ್ರ, ಜ್ಯೋತಿ, ಕುಮಾರ್ ಗೌಡ, ಇಂದಿರಾ, ಸುಬ್ಬೇಗೌಡ, ಎಳನೀರು ರಾಮಣ್ಣ, ರಾಧಾಕೃಷ್ಣ, ದರ್ಶನ್ ಗೌಡ, ದೊರೆಸ್ವಾಮಿ, ಡಾ. ರಾಮಚಂದ್ರ ಸಿ ಜಿ, ಸಿದ್ದರಾಜು, ಪ್ರದೀಪ್, ದಿಲೀಪ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು

About Author

Leave a Reply

Your email address will not be published. Required fields are marked *