ಕೊರೋನಾಗೆ ಬಲಿಯಾದ ಅಧ್ಯಾಪಕರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಮೈವಿವಿ ಪದವಿ ಕನ್ನಡ ಅಧ್ಯಾಪಕರ ಸಂಘ

1 min read

ಮೈಸೂರು: ಮೈವಿವಿ ಪದವಿ ಕನ್ನಡ ಅಧ್ಯಾಪಕರ ಸಂಘ, ಮೈಸೂರು ಕೊರೋನಾ ಮಾರಕ ರೋಗಕ್ಕೆ ಬಲಿಯಾದ ಕನ್ನಡ ಅತಿಥಿ ಅಧ್ಯಾಪಕರಾದ ಡಾ.ಬಾಬುರಾಜು ಮತ್ತು ವೆಂಕಟೇಶ್ ಅವರ ಕುಟುಂಬಕ್ಕೆ ತಲಾ ಒಂದು ಲಕ್ಷದ ಹತ್ತು ಸಾವಿರ ರೂಪಾಯಿಯಂತೆ ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಹಾಗೂ ಎರಡು ಕುಟುಂಬಗಳಿಗೂ ಆಹಾರ ಕಿಟ್ ಗಳನ್ನು ನೀಡಿತು.

ತುಂಬಾ ಆರ್ಥಿಕ ಸಂಕಷ್ಟದಲ್ಲಿದ್ದ ಎರಡು ಕುಟುಂಬಗಳ ನೋವಿಗೆ ಸ್ಪಂದಿಸಿದ ಮೈಸೂರು ವಿಶ್ವವಿದ್ಯಾನಿಲಯ ಪದವಿ ಕನ್ನಡ ಅಧ್ಯಾಪಕರು ಸ್ವಯಂ ಪ್ರೇರಣೆಯಿಂದ ನೀಡಿದ ಹಣವನ್ನು ಸಂಗ್ರಹಿಸಿ 2,20,000 ರೂಗಳನ್ನು ಎರಡು ಕುಟುಂಬಗಳಿಗೂ ಇಂದು ಬೆಳಿಗ್ಗೆ ಅವರ ಮನೆಗೆ ಹೋಗಿ ನೀಡಲಾಯಿತು. ನಗದು ಜೊತೆಗೆ ಆಹಾರಕಿಟ್ ಗಳನ್ನು ಕೊಡಲಾಯಿತು. ನೊಂದ ಕುಟುಂಬ ಸದಸ್ಯರು ಇದ್ದರು.

ಪದವಿ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಎಚ್.ಆರ್.ತಿಮ್ಮೇಗೌಡ, ಮೈವಿವಿ ಸಂಜೆ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕ ಡಾ.ಸಿ.ಡಿ.ಪರಶುರಾಮ, ಹುಣಸೂರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ನಂಜುಂಡಸ್ವಾಮಿ ಹರದನಹಳ್ಳಿ ಉಪಸ್ಥಿತರಿದ್ದರು.

ನೊಂದ ಕುಟುಂಬಕ್ಕೆ ನೈತಿಕ ಧೈರ್ಯತುಂಬಿ ಸಾಂತ್ವನ ಹೇಳಲಾಯಿತು.

About Author

Leave a Reply

Your email address will not be published. Required fields are marked *