ಇಂದಿನಿಂದ ಮೈಸೂರಿನ ಬಹುತೇಕ ಪ್ರವಾಸಿ ತಾಣಗಳು ಪ್ರಾರಂಭ
1 min read
ಮೈಸೂರು: ಕೋವಿಡ್ ಪ್ರಕರಣಗಳು ಕಡಿಮೆಯಾದ ಹಿನ್ನೆಲೆ ರಾಜ್ಯಾದ್ಯಂತ ಅನ್ ಲಾಕ್ ಪ್ರಕ್ರಿಯೆ ಜಾರಿಗೊಂಡಿದ್ದು ಇಂದಿನಿಂದ ಮೈಸೂರಿನ ಬಹುತೇಕ ಪ್ರವಾಸಿ ತಾಣಗಳು ಪ್ರಾರಂಭವಾಗಿದೆ.
ಮೈಸೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಮೈಸೂರು ಅರಮನೆ, ಮೃಗಾಲಯ ಹಾಗೂ ಕಾರಂಜಿ ಕೆರೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಮೈಸೂರಿನ ಪ್ರವಾಸಿ ತಾಣಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ಪ್ರವಾಸಿ ತಾಣಗಳು ಆರಂಭವಾಗುತ್ತಿದ್ದಂತೆ ಬಹುತೇಕ ಉದ್ಯಮಗಳು ಪ್ರಾರಂಭವಾಗುತ್ತಿದೆ. ಮೈಸೂರಿನ ವ್ಯಾಪಾರ ವಹಿವಾಟು ಚಟುವಟಿಕೆಯತ್ತ ಮುಖ ಮಾಡುತ್ತಿದೆ. ಕೋವಿಡ್ ನಿಯಮಗಳೊಂದಿಗೆ ಇಂದಿನಿಂದ ಪ್ರವಾಸಿ ತಾಣಗಳು ಪ್ರಾರಂಭವಾಗುತ್ತಿದೆ.
