ಎರಡೂವರೆ ತಿಂಗಳ ಬಳಿಕ ದರುಶನ ಭಾಗ್ಯ ಕರುಣಿಸಿದ ತಾಯಿ ಚಾಮುಂಡೇಶ್ವರಿ: ಇಂದಿನ ಬೆಟ್ಟದ Exclusive ಚಿತ್ರಗಳು!
1 min readಮೈಸೂರು: ಇಂದಿನಿಂದ ಅನ್ ಲೌಕ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಹಲವು ದೇವಾಲಯಗಳಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯವನ್ನು ಮುಂಜಾನೆಯಿಂದ ತೆರೆದಿದ್ದು, ಭಕ್ತರು ಸರತಿ ಸಾಲಿನಿಂತು ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.
ಕೋವಿಡ್-19 ಮುಂಜಾಗ್ರತೆ ಹಿನ್ನೆಲೆಯಲ್ಲಿ ದೇವಾಲಯದ ಒಳ ಹಾಗೂ ಹೊರ ಆವರಣ, ಭಕ್ತರು ಸಂಚರಿಸುವ ಮಾರ್ಗದಲ್ಲಿ ಸ್ಯಾನಿಟೈಸರ್ ಮಾಡಿ ಶುದ್ಧಿಗೊಳಿಸಲಾಗಿದೆ. ವ್ಯಕ್ತಿಗತ ಅಂತರ, ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ.
ಇನ್ನು ಜಿಲ್ಲೆಯ ನಂಜುಂಡೇಶ್ವರನ ದೇವಾಲಯ, ಮೂಡುಕುತೊರೆ ಮಲ್ಲಿಕಾರ್ಜುನ ದೇವಾಲಯ ಸೇರಿದಂತೆ ಹಲವು ದೇವಾಲಯಗಳ ಬಾಗಿಲು ತೆರೆಯುತ್ತಿವೆ. ಸರ್ಕಾರದ ಅದೇಶಕ್ಕನುಗುಣವಾಗಿ ದೇವಸ್ಥಾನ ಕಾರ್ಯಮ್ರಮಗಳು ನಡೆಯಲಿವೆ.