ಇಂದಿನಿಂದ ಮೈಸೂರಿನ ಎಲ್ಲಾ ಚಿತ್ರಮಂದಿರ ಸ್ಥಗಿತ!
1 min readಮೈಸೂರು : ಇಂದಿನಿಂದ ಮೈಸೂರು ಚಿತ್ರಮಂದಿರಗಳು ಬಂದ್ ಆಗಲಿದ್ದು ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ರೂಲ್ಸ್‌ಗೆ ಮಾಲೀಕರು ಕಂಗಾಲಾಗಿ ಮಾಲೀಕರು ಈ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಚಿತ್ರಮಂದಿರಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಕಠಿಣ ನಿಯಮಗಳ ಜೊತೆ ಚಿತ್ರಮಂದಿರ ನಡೆಸಲು ಹಿಂದೇಟು ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಇಂದಿನಿಂದ ಮೈಸೂರಿನ ಎಲ್ಲಾ ಚಿತ್ರಮಂದಿಗಳು ಬಂದ್ ಆಗಲಿದೆ.
ಯಾವಾಗ ಓಪನ್!
ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ತೆಗೆಯುವ ವರೆಗೂ ಚಿತ್ರಮಂದಿರಗಳು ತಾತ್ಕಾಲಿಕವಾಗಿ ಬಂದ್ ಆಗಿರಲಿದೆ ಎಂದು ಚಿತ್ರಮಂದಿರ ಮಾಲೀಕರ ಸಂಘ ನಿರ್ಧಾರ ಮಾಡಿದೆ. ಬಹುತೇಕ ವೀಕೆಂಡ್ ನಲ್ಲೇ ಶೇ.60ರಷ್ಟು ವ್ಯಾಪಾರ ವಹಿವಾಟು ನಡೆಯುತ್ತೆ. ಆದರೆ ವೀಕೆಂಡ್ ಕರ್ಫ್ಯೂನಿಂದಾಗಿ ಶನಿವಾರ, ಭಾನುವಾರ ಚಿತ್ರಮಂದಿರ ತೆಗೆಯುವಂತಿಲ್ಲ. ಅಲ್ಲದೆ ನೈಟ್ ಕರ್ಫ್ಯೂನಿಂದ ರಾತ್ರಿ ಶೋಗೂ ಜನರಿಲ್ಲದ ಪರಿಸ್ಥಿತಿ ಇದೆ ಬಂದಿದೆ. ಇನ್ನು 50-50 ನಿಯಮದಲ್ಲಿ ಚಿತ್ರಮಂದಿರ ನಡೆಸಲು ಆಗ್ತಿಲ್ಲ. ಹಾಗಾಗಿ ಕರ್ಫ್ಯೂ ತೆಗೆಯುವ ವರೆಗೂ ಚಿತ್ರಮಂದಿರ ಬಂದ್ ಗೆ ನಿರ್ಧಾರ ಮಾಡಿದ್ದೇವೆ ಅಂತ ಚಿತ್ರಮಂದಿರ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಗಾಯಿತ್ರಿ ಚಿತ್ರಮಂದಿರದ ಮಾಲೀಕರು ಆದ ರಾಜಾರಾಂ ಅವರು ನನ್ನೂರು ಮೈಸೂರು’ಗೆ ಮಾಹಿತಿ ನೀಡಿದ್ದಾರೆ.