ಮಾನವೀಯತೆ ಮೆರೆದ ಮೈಸೂರು ಪೊಲೀಸರು!

1 min read

ಮೈಸೂರು : ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಆಭರಣದ ಅಂಗಡಿಗೆ ನುಗ್ಗಿದ್ದ ದರೋಡೆಕೋರರಿಂದ ಅಮಾಯಕನ ಗುಂಡಿಕ್ಕಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸೆರೆ ಹಿಡಿದ ಪೊಲಿಸರಿಗೆ ರಾಜ್ಯ ಸರ್ಕಾರ ನೀಡಿದ್ದ ಬಹುಮಾನದ ಹಣದಲ್ಲಿ ಒಂದು ಲಕ್ಷ ರೂಪಾಯಿಯನ್ನು ಘಟನೆಯಲ್ಲಿ ಸಾವನ್ನಪ್ಪಿದ ಅಮಾಯಕ‌ ಚಂದ್ರುವಿನ ಕುಟುಂಬಕ್ಕೆ ‌ನೀಡಿ ಮಾನವೀಯತೆ ಮರೆದ ಘಟನೆ ಮೈಸೂರಿನಲ್ಲಿ ನಡೆದಿದೆ.

-ಘಟನೆ ನಡೆದ ದಿನ ಚಿನ್ನದ ಓಲೆ ಖರೀದಿಸಲು ಬಂದಿದ್ದ ಮೈಸೂರು ತಾಲ್ಲೂಕಿನ ದಡದಹಳ್ಳಿ ಗ್ರಾಮದ ಚಂದ್ರು ಎಂಬಾತ ದರೋಡೆಕೋರರು ಹಾರಿಸಿದ ಗುಂಡು ತಗುಲಿ ಸಾವನ್ನಪ್ಪಿದ್ದ. ಇದಾದ ಬಳಿಕ ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ಆರೋಪಿಗಳ‌ನ್ನು ಬಂಧಿಸುವಲ್ಲಿ‌ ಮೈಸೂರು ಪೊಲೀಸರು ಯಶಸ್ವಿಯಾಗಿದ್ದರು.

-ಪೊಲೀಸರ ತ್ವರಿತ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯ ಸರ್ಕಾರ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ರಾಜ್ಯ ಸರ್ಕಾರ ನೀಡಿದ ಬಹುಮಾನದ ಹಣದಲ್ಲಿ ಒಂದು ಲಕ್ಷ ರೂಪಾಯಿಯನ್ನು ಮೃತ ಚಂದ್ರುವಿನ ಕುಟುಂಬಕ್ಕೆ ನೆರವಿನ ರೂಪದಲ್ಲಿ ನೀಡುವ ಮೂಲಕ ಮೈಸೂರು ಪೊಲೀಸರು ಮಾದರಿಯಾಗಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ, ಡಿಸಿಪಿ ಗಳಾದ ಪ್ರದೀಪ್‌ಗುಂಟಿ, ಗೀತಾ ಪ್ರಸನ್ನ ರಿಂದ ಮೃತ ಚಂದ್ರುವಿನ ತಾಯಿಗೆ ಒಂದು ಲಕ್ಷ ನಗದು ಹಸ್ತಾಂತರ ಮಾಡಿದ್ದಾರೆ. ಈ ವೇಳೆ ಮೃತ ಚಂದ್ರುವಿನ ತಂದೆ ರಂಗಸ್ವಾಮಿ ಸೇರಿದಂತೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.‌

About Author

Leave a Reply

Your email address will not be published. Required fields are marked *