ಮೈಸೂರಿಗರೇ ಗಮನಿಸಿ : ದಸರಾ ಹಿನ್ನಲೆ‌ ರಸ್ತೆ ಸಂಚಾರ ಬದಲು- ಹಲವೆಡೆ ಒನ್ ವೇ!

1 min read

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನಲೆಯಲ್ಲಿ ದಸರಾ ವೇಳೆ ಸಂಚಾರ ನಿಯಮಗಳಲ್ಲಿ ಕೆಲ ಬದಲಾವಣೆಯಾಗಿದ್ದು, ಹಲವು ಪ್ರದೇಶಗಳಲ್ಲಿ ವಾಹನಗಳ ನಿಲುಗಡೆ ನಿಷೇಧ ಮಾಡಲಾಗಿದೆ.

ದಸರಾ ವೇಳೆ ಸಂಚಾರ ದಟ್ಟಣೆ ಉಂಟಾಗುವ ಕಾರಣ

07.10.2021 ರಿಂದ 15.10.2021ರ ವರೆಗೆ ಹೊಸ ಆದೇಶ ಜಾರಿಯಾಗಿದ್ದು, ಪ್ರತಿದಿನ ಮದ್ಯಾಹ್ನ 4-00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ ಈ ನಿಯಮ ಜಾರಿಯಲ್ಲಿರಲಿದೆ.

ಅಂಬಾವಿಲಾಸ ಅರಮನೆ ಸುತ್ತ ಮುತ್ತ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ

ಸಯ್ಯಾಜಿರಾವ್ ರಸ್ತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ
ಪುರಂದರ ರಸ್ತೆ, ಬಿ. ರಾಚಯ್ಯ ವೃತ್ತದಿಂದ ಬಿ.ಎನ್ ರಸ್ತೆ ಜಂಕ್ಷನ್ ವರೆಗೆ,‌ ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತದವರೆಗೆ,‌ ಆಲ್ಬರ್ಟ್ ವಿಕ್ಟರ್ ರಸ್ತೆಯ ಜಯಚಾಮರಾಜೇಂದ್ರ ವೃತ್ತದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದವರೆಗೆ
ಅಶೋಕ ರಸ್ತೆಯ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ
ಅಶೋಕ ರಸ್ತೆಯ ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ

ಅರಮನೆ ಮುಂಭಾಗದ ರಸ್ತೆ


ಬಲರಾಮ ದ್ವಾರದ ಮುಂಭಾಗ
ಡಾ. ರಾಜ್‌ಕುಮಾರ್‌ ವೃತ್ತದಿಂದ ಬಿ.ಎನ್. ನರಸಿಂಹಮೂರ್ತಿ ವೃತ್ತದವರೆಗೆ
ವಸ್ತು ಪ್ರರ್ದಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆಯ ಬಿಎನ್ ರಸ್ತೆ ಜಂಕ್ಷನಿಂದ ಮೃಗಾಲಯದ ರಸ್ತೆವರೆಗೆ
ಇಟ್ಟಿಗೆಗೂಡಿನ ಹೊಸ ಬೀದಿ 5ನೇ ತಿರುವು ರಸ್ತೆ ಮೃಗಾಲಯದ ವೃತ್ತದಿಂದ ವಸ್ತು ಪ್ರರ್ದಶನದ ಪೂರ್ವ ದ್ವಾರದವರೆಗೆ
ವಾಣಿವಿಲಾಸ ರಸ್ತೆ ಜಂಕ್ಷನ್‌ನಿಂದ ಲೋಕರಂಜನ್‌ ರಸ್ತೆ ವರೆಗೆ
ಮಲೆ ಮಹದೇಶ್ವರ ರಸ್ತೆಯ ಬಿ.ಎನ್.ರಸ್ತೆ ಜಂಕ್ಷನ್‌ನಿಂದ (ಛತ್ರಿಮರ) ಚನ್ನಯ್ಯ ವೃತ್ತದವರೆಗೆ
ಸರ್ಕಾರಿ ಭವನದ ರಸ್ತೆಯ ಸರ್ಕಾರಿ ಭವನದ ದ್ವಾರದ ರಾಜೇಂದ್ರ ಒಡೆಯರ್ ವೃತ್ತದವರೆಗೆ
ವಾಹನ ನಿಲುಗಡೆ ನಿಷೇಧಿಸಿ ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಎಲ್ಲೆಲ್ಲಿ ಒನ್ ವೇ!?

ನಗರದಲ್ಲಿ ತಾತ್ಕಾಲಿಕ ಏಕಮುಖ ವಾಹನ ಸಂಚಾರ ವ್ಯವಸ್ಥೆ.
07.10.2021 ರಿಂದ 15.10.2021
ಪ್ರತಿದಿನ ಮದ್ಯಾಹ್ನ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಏಕ ಮುಖ ಸಂಚಾರ.
ಅರಮನೆಯ ಸುತ್ತಲಿನ ರಸ್ತೆಗಳು

ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ ಕುಸ್ತಿ ಅಖಾಡ ಜಂಕ್ಷನ್.
ಬಿ.ಎನ್.ರಸ್ತೆ ಜಯಚಾಮರಾಜ ಒಡೆಯರ್ ವೃತ್ತ.
ಆಲ್ಬರ್ಟ್ ಪಿಕ್ಚರ್ ರಸ್ತೆ ಚಾಮರಾಜ ಒಡೆಯರ್‌ ವೃತ್ತ.


ಆಲ್ಬರ್ಟ್ ವಿಕ್ಟರ್ ರಸ್ತೆ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ.
ನ್ಯೂ ಎಸ್.ಆರ್.ರಸ್ತೆ ಬಸವೇಶ್ವರ ವೃತ್ತ.
ಚಾಮರಾಜ ಜೋಡಿ ರಸ್ತೆ, ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದಲ್ಲಿ ಏಕಮುಖ ಸಂಚಾರಕ್ಕೆ ಆದೇಶ.
ಇದರ ಜೊತೆಗೆ ಮೈಸೂರಿನ ಹಲವು ಪ್ರಮುಖ ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ.
ಮೈಸೂರು‌ನಗರ ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ ಆದೇಶ.

About Author

Leave a Reply

Your email address will not be published. Required fields are marked *