ಮೈಸೂರಲ್ಲಿ 2489 ಮಂದಿ ಡಿಸ್ಚಾರ್ಜ್- 1879 ಮಂದಿಗೆ ಪಾಸಿಟಿವ್- 16 ಮಂದಿ ಸಾವು!
1 min readಮೈಸೂರು: ಮೈಸೂರಿನಲ್ಲಿಂದು 1,879 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,19,632 ಕ್ಕೇರಿಕೆಯಾಗಿದೆ.
ಇನ್ನು ಇಂದು 2,489 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 1,04,943 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 13,236ಕ್ಕೆ ಏರಿಕೆಯಾಗಿದೆ.
ಅಲ್ಲದೆ ಮೈಸೂರಿನಲ್ಲಿಂದು 16 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಇದುವರೆಗೆ 1,453 ಕೊರೊನಾ ಸೋಂಕಿತರು ಮೃತರಾಗಿದ್ದಾರೆ.