ಮೈಸೂರಿನಲ್ಲಿಂದು 1,720 ಕೊರೊನಾ ಪಾಸಿಟಿವ್ ಕೇಸ್ ಪತ್ತೆ: 28 ಮಂದಿ ಸಾವು
1 min read![](https://nannurumysuru.com/wp-content/uploads/2021/05/Mysuru-1-1.jpg)
ಮೈಸೂರು: ಮೈಸೂರಿನಲ್ಲಿಂದು 1,720 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,40,085 ಕ್ಕೇರಿಕೆಯಾಗಿದೆ.
ಇನ್ನು ಇಂದು 2,176 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 1,22,367 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16,114ಕ್ಕೆ ಏರಿಕೆಯಾಗಿದೆ.
![](https://nannurumysuru.com/wp-content/uploads/2023/09/Nayana-Kumars.jpg)
ಅಲ್ಲದೆ ಮೈಸೂರಿನಲ್ಲಿಂದು 28 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಇದುವರೆಗೆ 1,604 ಕೊರೊನಾ ಸೋಂಕಿತರು ಮೃತರಾಗಿದ್ದಾರೆ.
![](https://nannurumysuru.com/wp-content/uploads/2021/05/WhatsApp-Image-2021-05-29-at-7.48.04-PM-823x1024.jpeg)