ಮೈಸೂರಿನಲ್ಲಿಂದು 1,011 ಕೊರೊನಾ ಪಾಸಿಟಿವ್ ಕೇಸ್ ಪತ್ತೆ: 18 ಮಂದಿ ಸಾವು
1 min readಮೈಸೂರು: ಮೈಸೂರಿನಲ್ಲಿಂದು 1,011 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,55,246 ಕ್ಕೇರಿಕೆಯಾಗಿದೆ.
ಇನ್ನು ಇಂದು 738 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 1,39,042 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 14,410ಕ್ಕೆ ಏರಿಕೆಯಾಗಿದೆ.
ಅಲ್ಲದೆ ಮೈಸೂರಿನಲ್ಲಿಂದು 18 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಇದುವರೆಗೆ 1,794 ಕೊರೊನಾ ಸೋಂಕಿತರು ಮೃತರಾಗಿದ್ದಾರೆ.
ಮೈಸೂರು ನಗರ ಹಾಗೂ ತಾಲ್ಲೂಕುವಾರು ಪಾಸಿಟಿವ್ ಪ್ರಕರಣಗಳ ವಿವರ:
- ಹೆಚ್ ಡಿ ಕೋಟೆ 57
- ಹುಣಸೂರು 65
- ಕೆ ಆರ್ ನಗರ 79
- ಮೈಸೂರು ನಗರ 493
- ಮೈಸೂರು ತಾಲ್ಲೂಕು 98
- ನಂಜನಗೂಡು 76
- ಪಿರಿಯಾಪಟ್ಟಣ 94
- ಟಿ ನರಸೀಪುರ 49