ಕೋವಿಡ್ ಲಸಿಕೆ ಪಡೆದವರ ದೇಹದಲ್ಲಿ ವಿದ್ಯುತ್ ಉತ್ಪತ್ತಿ ಸುಳ್ಳು
1 min readತಿ.ನರಸೀಪುರ: ಕೋವಿಡ್ ಲಸಿಕೆ ಪಡೆದವರ ದೇಹದಲ್ಲಿ ವಿದ್ಯುತ್ ಉತ್ಪತ್ತಿ ಆಗುತ್ತಿರುವುದು ಸುಳ್ಳು ಅಂತ ಮೈಸೂರಿನ ನಿವಾಸಿಯೊಬ್ಬರು ಪ್ರಯೋಗದ ಮೂಲಕ ಸಾಬೀತುಪಡಿಸಿದ್ದಾರೆ.
ಹೌದು. ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ಕೆಬ್ಬೆಹುಂಡಿ ಗ್ರಾಮದ ನಿವಾಸಿ ಶಿವಕುಮಾರ್ ದೇಹದ ಮೇಲೆ ಬಲ್ಪ್ ಹೇಗೆ ಉರಿಯುತ್ತದೆ ಎನ್ನುವುದಕ್ಕೆ ಕಾರಣ ಕೊಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಕೋವಿಡ್ ಲಸಿಕೆ ಪಡೆದವರ ದೇಹದಲ್ಲಿ ವಿದ್ಯುತ್ ಉತ್ಪತ್ತಿ ಎಂದು ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಬೆನ್ನಲ್ಲೇ ತಾವೇ ಪ್ರಯೋಗಕ್ಕೆ ಶಿವಕುಮಾರ್ ಮುಂದಾದರು.
ಇದು ಯಾವುದೇ ರೀತಿಯ ಪವಾಡ, ಮ್ಯಾಜಿಕ್ ಅಲ್ಲ. ತೇವಂಶವಿರುವ ದೇಹದ ಯಾವುದೇ ಭಾಗದಲ್ಲಿ ಇಟ್ಟರು ಬಲ್ಪ್ ಉರಿಯಲಿದೆ. ಕೋವಿಡ್ ಲಸಿಕೆ ಪಡೆಯದ ವ್ಯಕ್ತಿ, ಮಕ್ಕಳ ದೇಹದಲ್ಲೂ ಕೂಡ ಬಲ್ಪ್ ಉರಿಯುತ್ತೆ ಅಂತ ಶಿವಕುಮಾರ್ ಅವರು ಪ್ರಯೋಗದ ಮೂಲಕ ಸಾಬೀತುಪಡಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಶಿವಕುಮಾರ್ ರವರ ವಿಡಿಯೋ ಕುತೂಹಲ ಮೂಡಿಸಿದೆ.