ಮೈಸೂರು ಪೊಲೀಸರಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಕರೋನಾ ಮಾರಿ!
1 min readಮೈಸೂರು ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಲ್ಲೂ ಕೊರೊನಾ ಸೋಂಕು ಹೆಚ್ಚಳವಾಗಿದ್ದು ಕಳೆದ ಮಂಗಳವಾರ ಒಂದೇ ದಿನ ಮೈಸೂರು ನಗರದ 30 ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ 89 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಹೆಚ್ಚಿನ ಸೋಂಕು ಕಾನ್ಸ್ಟಟೇಬಲ್ ಗಳಲ್ಲಿ ಪತ್ತೆಯಾಗಿದೆ.
- ಈಗಾಗಲೇ ಎಲ್ಲರ ಆರೋಗ್ಯವೂ ಸ್ಥಿರವಾಗಿದ್ದು, ಇದುವರೆಗೂ 2300ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ಕೋವಿಡ್ ಪರೀಕ್ಷೆ ನಡೆದಿದ್ದು, ಎಲ್ಲಾ ಪೊಲೀಸರಿಗೂ ಕೋವಿಡ್ ಪರೀಕ್ಷೆ ಕಡ್ಡಾಯಯಗೊಳಿಸಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಬಹುತೇಕ ಮಂದಿಯಲ್ಲಿ ಕೋವಿಡ್ ಲಕ್ಷಣಗಳಿಲ್ಲದಿದ್ದರೂ ಸೋಂಕು ಪತ್ತೆಯಾಗುತ್ತಿದೆ.
ಪ್ರಸ್ತುತ ಮೈಸೂರು ನಗರ ವಿಭಾಗದಲ್ಲಿ 3116 ಮಂದಿ ಪೊಲೀಸರು ಕರ್ತವ್ಯ ನಿರ್ಹಹಣೆ ಮಾಡುತ್ತಿದ್ದು, ಈ ಪೈಕಿ 3106 ಮಂದಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. 3098 ಮಂದಿ 2 ನೇ ಡೋಸ್ ಪಡೆದಿದ್ದು, ಕೊರೊನಾ ಲಸಿಕೆಯ ಬೂಸ್ಟರ್ ಡೋಸನ್ನು 518 ಮಂದಿ ಪೊಲೀಸರು ಪಡೆದಿದ್ದಾರೆ.