ರಸ್ತೆಗುಂಡಿ ವಿರುದ್ಧ ಕಿರಿಕಾರಿದ ಮೈಸೂರಿಗರು!
1 min readಮೈಸೂರು : ಮೈಸೂರಿನ ರಸ್ತೆ ಗುಂಡಿಗಳಿಂದ ಪ್ರತಿನಿತ್ಯ ಅಪಘಾತಕ್ಕೆ ಕಾರಣವಾಗುತ್ತಿರುವ ಮೈಸೂರು ನಗರಪಾಲಿಕೆ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಮೈಸೂರು ಪ್ರಜ್ಞಾವಂತ ವೇದಿಕೆ ಮೈಸೂರಿನ ಕಾಂತರಾಜ ರಸ್ತೆ ರಾಮಮಂದಿರ ಮುಂಭಾಗ ಭಾನುವಾರ ರಾತ್ರಿ ರಸ್ತೆ ಹಳ್ಳ ಗುಂಡಿಯ ದುಸ್ಥಿತಿಯಿಂದ ಚಾಲನೆ ತಪ್ಪಿ ಸಾವನಪ್ಪಿದ್ದ ದರ್ಶನ್ ಕುಮಾರ್ 30 ನಿಧನಕ್ಕೆ ಗುಂಡಿ ರಸ್ತೆ ದುರಸ್ಥಿ ಡಾಂಬಾರೀಕರಣ ಮಾಡದ ನಿರ್ಲಕ್ಷ್ಯ ಮೈಸೂರು ನಗರಪಾಲಿಕೆ ದುರಾಡಳಿತ ಕಾರಣ ಎಂದು ಖಂಡಿಸಿ ಮೈಸೂರು ಪ್ರಜ್ಞಾವಂತ ವೇದಿಕೆ ಹಾಗೂ ಕೃಷ್ಣಮೂರ್ತಿಪುರಂ ಲಕ್ಷ್ಮಿಪುರಂ ನಿವಾಸಿಗಳು ಕೃಷ್ಣಮೂರ್ತಿಪುರಂ ರಾಮಮಂದಿರ ಎದುರು ಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನ ಕೂಗಿ ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿ ಕಳೆದ ಎರಡ್ಮೂರು ವರ್ಷಗಳಿಂದ ಮೈಸೂರು ನಗರದ ಬಹುತೇಖ ಮುಖ್ಯ ರಸ್ತೆಗಳು ಟಾರ್ ಡಾಂಬರೀಕರಣ ಭಾಗ್ಯ ಕಂಡಿಲ್ಲ ಇದರಿಂದಾಗಿ ರಸ್ತೆ ಅಫಘಾತದಲ್ಲಿ ಹಿರಿಯ ನಾಗರೀಕರು ಮಹಿಳೆಯರು ಬಿದ್ದು ಅಪಘಾತ ಮಾಡಿಕೊಳ್ಳುವವರ ಸಂಖ್ಯೆ ದಿನೆದಿನೇ ಹೆಚ್ಚುತ್ತಿದೆ, ಹಳ್ಳಕೊಳ್ಳಗಳ ರಸ್ತೆ, ವಾಹನ ಸಂಚಾರ ಹೆಚ್ಚಿರುವ ಮುಖ್ಯ ರಸ್ತೆಗಳಲ್ಲಿ ಸುಗಮ ಸಂಚಾರ ರಸ್ತೆ ಸುರಕ್ಷತೆಯ ಬಗ್ಗೆ ಗಮನ ನೀಡದ ನಗರಪಾಲಿಕೆ ಬೇಸರದ ಸಂಗತಿ, ಕೇವಲ ಸಿಸಿ ಕ್ಯಾಮರದಲ್ಲಿ ಹೆಲ್ಮೆಟ್ ದಂಡ ನೋಪಾರ್ಕಿಂಗ್ ದಂಡ ವಿಧಿಸುವ ಅಧಿಕಾರಿಗಳಿಗೆ ರಸ್ತೆ ಗುಂಡಿ ಹಳ್ಳಕೊಳ್ಳಗಳು ಅದರಿಂದಾದ ಅಪಘಾತಗಳ ಬಗ್ಗೆ ಅರಿವಿಲ್ಲವೇ?? ಮುಂಜಾಗ್ರತಾ ಕ್ರಮ ಮಾನವೀಯತೆವಿಲ್ಲವೇ? ಮಳೆಯಿಂದಾಗಿ ಕೆಲವೆಡೆ ಮರಳುಕಸ ಕಲ್ಲುಗಳು ಹಾಗೇ ವೃತ್ತಗಳಲ್ಲಿ ರಸ್ತೆಯಬದಿಗಳಲ್ಲಿವೆ ಅಪಘಾತಗಳಿಗೆ ಅಹ್ವಾನವೆಂಬಂತಿದೆ ಎನ್ನುವ ನಾಗರೀಕರು ಮತ್ತು ತೆರಿಗೆದಾರರ ಬೈಗುಳ ನಗರಪಾಲಿಕೆಗೆ ಕೇಳಿಸುತ್ತಿಲ್ಲವೇ? ಗುಂಡಿ ಮುಚ್ಚಲು ಈಗಾಗಲೇ ನಿಗಧಿಯಾಗಿರುವ ಹಣವನ್ನ ಬಿಡುಗಡೆ ಮಾಡಿ ಡಾಂಬರೀಕರಣಕ್ಕೆ ಆಯುಕ್ತರು ಅವಕಾಶ ಮಾಡಿಕೊಡಲಿ.
-ಅಧಿಕಾರಿಗಳು ಎಸಿ ಕಾರಿನಿಂದ ರಸ್ತೆಗಿಳಿದು ಜನರಜೀವ ಉಳಿಸಲು ಅಪಾಯದ ಗುಂಡಿಗಳ ವೀಕ್ಷಣೆಗೆ ಮುಂದಾಗಲಿ ಅಭಿವೃದ್ಧಿ ಅಧಿಕಾರಿಗಳು ವಲಯ ಇಂಜಿನಿಯರ್ ಗಳು, ಈಗಲೇ ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ವಾರ್ಡ್ ವ್ಯಾಪ್ತಿಯಲ್ಲಿ ಅಪಘಾತವಾಗುವ ಅಪಾಯದ ಗುಂಡಿಗಳನ್ನ ಗುರುತಿಸಿ ತೇಪೆ ಹಾಕಲು ಮುಂದಾಗಬೇಕು ಮತ್ತು ಕೃಷ್ಣಮೂರ್ತಿಪುರಂ ರಾಮಮಂದಿರ ಎದುರು ರಸ್ತೆ ಅಪಘಾತದಿಂದಾಗಿ ಮೃತರಾದ ದರ್ಶನ್ ಕುಮಾರ್ ಕುಟುಂಬಕ್ಕೆ ಬಮರಣ ಪರಿಹಾರ ನಿಧಿ ಕೊಡಲು ಮೈಸೂರು ನಗರ ಪಾಲಿಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೃಷ್ಣರಾಜೇಂದ್ರ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜು ಬಸಪ್ಪ, ಕಾಂಗ್ರೆಸ್ ಮುಖಂಡರಾದ ಜಿ. ರಾಘವೇಂದ್ರ, ವಿನಯ್ ಕಣಗಾಲ್, ಎಸ್.ಎನ್ ರಾಜೇಶ್, ಜೈ ಭೀಮ್ ಜನಸ್ಪಂದನ ವೇದಿಕೆ ಚೇತನ್ ಕಾಂತರಾಜು, ಶ್ರೀಕಾಂತ್ ಕಶ್ಯಪ್, ಯೋಗಿಶ್, ಹರೀಶ್ ನಾಯ್ಡು, ಕೆಫೆ ಪ್ರಸಾದ್, ಕಾಂತರಾಜು, ಶಿವಕುಮಾರ್ ಇನ್ನಿತರರು ಇದ್ದರು