ಅರಮನೆಯಲ್ಲಿರುವ 300 ವರ್ಷದ ಚಿತ್ರಗಳ ಸಂರಕ್ಷಣಾ ಕಾರ್ಯ ಶುರು!

1 min read

ಮೈಸೂರಿನ ಅರಮನೆ ಆವರಣದಲ್ಲಿರುವ ವರಹಾಸ್ವಾಮಿ ದೇವಸ್ಥಾನ ಮತ್ತು ಅಂಬುಜವಲ್ಲಿ ಮಹಾಲಕ್ಷ್ಮೀ ದೇವಾಲಯದಲ್ಲಿರುವ ದೇವರ ಚಿತ್ರಗಳ ಸಂರಕ್ಷಣೆಯ ಕಾರ್ಯ ಭರದಿಂದ ಸಾಗಿದೆ. ಹೊಯ್ಸಳರ ಕಾಲದಲ್ಲಿ ಮೂಲ ವಿಗ್ರಹಗಳು ಶ್ರೀರಂಗಪಟ್ಟಣದಲ್ಲಿ ನಿರ್ಮಾಣ ಮಾಡಲಾಗಿತ್ತು. ಅದನ್ನು ಚಿಕ್ಕದೇವರಾಜ ಒಡೆಯರ್ ಕ್ರಿ.ಶ. 1811ರಲ್ಲಿ ಮೈಸೂರಿನ ಅರಮನೆಯ ಆವರಣದಲ್ಲಿ ಸ್ಥಾಪಿಸಲಾಗಿತ್ತು. ಟಿಪ್ಪು ಸುಲ್ತಾನ್ ಪತನ ಹೊಂದಿದ ನಂತರ ಅಂದಿನ ದಿವಾನರಾಗಿದ್ದ ಪೂರ್ಣಯ್ಯನವರು ದೇವಾಲಯ ಮತ್ತು ಅದರ ಒಳ ಭಾಗದ ಗೊಡೆಗಳ ಮೇಲೆ ರಾಮಯಾಣ, ಮಹಾಭಾರತ ಕಥೆಯನ್ನು ಸಾರುವ ಚಿತ್ರಗಳನ್ನ ಚಿತ್ರಿಸಿ ಪೂರ್ಣಗೊಳಿಸಿದರು.

ಅತ್ಯಾರ್ಷಕವಾಗಿರವ 300 ವರ್ಷಗಳ ಚಿತ್ರಗಳನ್ನು ಸಂರಕ್ಷಣೆ ಮಾಡದೆ, ಎಲ್ಲಾ ಚಿತ್ರಗಳು ಮೂಲ ಸ್ವರೂಪವನ್ನು ಕಳೆದುಕೊಂಡಿದೆ. ಇದರಿಂದ ಕರ್ನಾಟಕ ಪುರಾತತ್ವ ಇಲಾಖೆ ಇದನ್ನು ಗಮನಿಸಿ ಅವುಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ. ಅದರಂತೆ ಸಾಂಸ್ಕೃತಿಕ ಸಂರಕ್ಷಣೆಗಾಗಿ ಲಕ್ನೋದಲ್ಲಿರುವ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಕ್ಕೆ ಈ ಚಿತ್ರಗಳ ಸಂರಕ್ಷಣಾ ಯೋಜನೆಯನ್ನು ನೀಡಿದೆ.

ಈ ಹಿನ್ನೆಲೆಯಲ್ಲಿ ಮೈಸೂರಿನ ಶಾಖೆಯಾದ ಪ್ರಾದೇಶಿಕ ಸಂರಕ್ಷಣಾ ಪ್ರಯೋಗಾಲಯದ ತಂಡ ಕಳೆದ ಸೆಪ್ಟಂಬರ್‌ನಿಂದಲ್ಲೇ ಚಿತ್ರಗಳ ಸಂರಕ್ಷಣೆ ಮಾಡಲು ಆರಂಭಿಸಿದೆ. ಈ ಕುರಿತು ನನ್ನೂರು ಮೈಸೂರು-ನೊಂದಿಗೆ ಮಾತನಾಡಿದ ಹಿರಿಯ ಸಂರಕ್ಷಣಾ ಅಸಿಸ್ಟೇಟ್ ಬಿಯಾಸ್ ಘೋಷ್, ನಮ್ಮ ತಂಡ ಈ ಹಿಂದೆ ಅರಮನೆ ಒಳಭಾಗದಲ್ಲಿರುವ ಅನೇಕ ಚಿತ್ರಗಳನ್ನು ಸಂರಕ್ಷಣೆ ಮಾಡಿದ್ದು, ಅದರಂತೆ ಈಗ ಈ ದೇವಾಲಯದಲ್ಲಿರುವ ಚಿತ್ರಗಳ ಸಂರಕ್ಷಣೆ ಮಾಡುತ್ತಿದ್ದೇವೆ. 300 ವರ್ಷಕ್ಕಿಂತ ಹಳೆಯ ಚಿತ್ತಗಳಾಗಿದ್ದು, ಆದರಿಂದ ಅದಷ್ಟು ಸೂಕ್ಷ್ಮವಾಗಿ ಸಂರಕ್ಷಣೆಯ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಂರಕ್ಷಣೆಯ ಹಂತಗಳು :

ದೇವಾಲಯದಲ್ಲಿ ಪ್ರಾಕೃತಿಕ ಬಣ್ಣ ಬಳಸಿ ಚಿತ್ರಿಸಿದ್ದಾರೆ. ಗೋಡೆ, ಮೇಲ್ಛಾವಣಿ, ಕಂಬಗಳು ಹಾಗೂ ಮರದ ಕಪಾಟು ಸೇರಿದಂತೆ ಎಲ್ಲಾ ಭಾಗಗಳಲ್ಲಿ ಚಿತ್ರಗಳಿದ್ದು, ಅದರಲ್ಲಿ ಚಿತ್ರಗಳದ ಕೆಲ ಭಾಗಗಳು ಉದುರಿಕೊಂಡಿದ್ದು, ಅದರ ಸುತ್ತಲೂ ಸ್ವಚ್ಛಗೊಳಿಸಿ ನಂತರ ಎದ್ದಿರುವ ಚಕ್ಕೆಗಳು ಬೀಳದಂತೆ ಸುಣ್ಣದಿಂದ ಪ್ಲಾಸ್ಟಿಂಗ್ ಮಾಡಲಾಗುತ್ತದೆ. ಮೊದಲ ಹಂತವಾಗಿ ಈ ಕಾರ್ಯ‌ ಮಾಡಿಕೊಳ್ಳಲಾಗುತ್ತಿದೆ. ಈ ಕಾರ್ಯ ಮುಗಿದ ನಂತರ ಪಾಕೃತಿಕ ಬಣ್ಣಗಳನ್ನು ಬಳಸಿ ಹಾಳಾಗಿರುವ ಭಾಗಗಳನ್ನು ಮತ್ತೆ ಚಿತ್ರಿಸಲಾಗುತ್ತದೆ.

ದೇವಾಲಯದಲ್ಲಿ ರಚಿಸಿರುವ ಮೂಲ ಚಿತ್ರಗಳನ್ನು ನೀಡುವಂತೆ ಪುರಾತತ್ವ ಇಲಾಖೆ ಮತ್ತು ಅರಮನೆ ಗ್ರಂಥಾಲಯದಲ್ಲಿಯೂ ತಿಳಿಸಲಾಗಿದ್ದು, ಅವುಗಳು ಸಿಕ್ಕರೆ ಕೆಲಸಗಳು ಇನ್ನೂ ಉತ್ತಮ ರೀತಿಯಲ್ಲಿ ಸಾಗುತ್ತದೆ. ಏಕೆಂದರೆ ದೇವಾಲಯದ ಮೇಲ್ಛಾವಣಿಯಲ್ಲಿ ರಚಿಸಿರುವ ಚಿತ್ರಗಳು ಸಂಪೂರ್ಣವಾಗಿ ಹಾಳಾಗಿದ್ದು, ಅದನ್ನು ಗಮನಿಸಿದರೆ, ರಾಮನ ಪಟ್ಟಾಭಿಷೇಕ, ಶ್ರೀಕೃಷ್ಣ , ವರಹಾ ಸ್ವಾಮಿ ಕುರಿತಾದ ಚಿತ್ರಗಳು ಎಂದು ಅನಿಸುತ್ತದೆ. ಆದರೆ ಮೂಲ ಚಿತ್ರಗಳು ಸಿಕ್ಕರೇ ಕಾರ್ಯ ಮತ್ತಷ್ಟು ಸುಗಮವಾಗುತ್ತದೆ ಎಂದ ಅವರು ಈ ಹಿಂದೆ ದೇವಾಲಯದಲ್ಲಿ ಬೇರೆ ಯಾರಾದರೂ ಕೆಮಿಕಲ್ ಬಣ್ಣಗಳನ್ನು ಬಳಸಿ ಈ ಚಿತ್ರಗಳನ್ನು ರಚಿಸಿದ್ದಾರೆಯೇ ಎಂದು ಪರೀಕ್ಷಿಸಲು ಈಗಾಗಲೇ ಇವುಗಳ ಮಾದರಿಯನ್ನು ಲಕ್ನೋದಲ್ಲಿರುವ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದು, ಅವುಗಳು ಬಂದ ನಂತರ ಆ ವರದಿ ಆಧರಿಸಿ ಯಾವ ರೀತಿ ಸಂರಕ್ಷಣೆ ಮಾಡಬೇಕೆಂದು ತಿಳಿಯುತ್ತದೆ ಎಂದರು.

ಚಿತ್ರದ ಈ ಸ್ಥಿತಿಗೆ ಕಾರಣ :

  1. ಅರಮನೆ ಆವರಣದಲ್ಲಿರುವ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿನಿತ್ಯ ದೇವರ ದರ್ಶಕ್ಕೆ ಭೇಟಿ ನೀಡುತ್ತಾರೆ. ಅದರಂತೆ ವರಹಾ ಸ್ವಾಮಿ, ಅಂಬುಜವಲ್ಲಿ ದೇವಾಲಯಕ್ಕೂ ಸಾರ್ವಜನಿಕರು ಭೇಟಿ ನೀಡುತ್ತಾರೆ. ಬರುವ ಸಾರ್ವಜನಿಕರು ದೇವರ ದರ್ಶನ ಪಡೆದ ನಂತರ ಇಲ್ಲಿನ ಅದ್ಭುತ ಚಿತ್ರಗಳನ್ನು ನೋಡಿ ಆನಂದಿಸುವ ಜೊತೆಗೆ ಅವುಗಳನ್ನು ಮುಟ್ಟುತ್ತಾರೆ ಇದರಿಂದಲ್ಲೂ ಈ ಸಮಸ್ಯೆ ಬರಬಹುದು.
  2. ಹಲವಾರು ವರ್ಷಗಳಿಂದ ದೇವಾಲಯದಲ್ಲಿ ಪೂಜೆಗಳು ನಡೆಯುತ್ತ ಬಂದಿದ್ದು, ಅದರಂತೆ ಪೂಜೆಗೆ ಕರ್ಪೂರ, ಗಂಧದ ಕಡ್ಡಿಗಳನ್ನು ಪ್ರತಿನಿತ್ಯ ಬಳಸುತ್ತಾರೆ. ಅದರ ಹೊಗೆ ದೇವಾಲಯದ ಒಳಭಾಗದಿಂದ ಹೊರಭಾಗಕ್ಕೆ ಹೋಗದೆ ಇಲ್ಲಿಯೇ ಉಳಿದು ಗೊಡೆಗಳ ಮೇಲೆ ಅದರ ಜಿಡ್ಡು ಕುಳಿತು ಸಹ ಈ ರೀತಿಯಾಗಿರಬಹುದು.
  3. ಅಥವಾ ವಾತವರಣದ ವೈಪರೀತ್ಯದಿಂದಲ್ಲೂ ಆಗಬಹುದು ಏಕೆಂದರೆ, ಈ ದೇವಾಲಯ ಸಂಪೂರ್ಣ ಕಲ್ಲಿನಿಂದ ನಿರ್ಮಾಣಗೊಂಡಿದ್ದು, ಅದರ ಮೇಲೆ ಚಿತ್ರಗಳನ್ನೂ ರಚಿಸಿದ್ದಾರೆ. ಮಳೆ ಬಂದು ಕಲ್ಲಿನ ಒಳಭಾಗಕ್ಕೆ ನೀರು ಸೇರಿದರೆ. ಚಿತ್ರಗಳು ಚಕ್ಕೆ ರೂಪದಲ್ಲಿ ಬಿಳುವ ಸಾಧ್ಯತೆ ಹೆಚ್ಚಿದೆ ಎಂದು ಅವರು ತಿಳಿಸಿದರು.
    ಕಳೆದ 6 ತಿಂಗಳುಗಳಿಂದ ಈ ಸಂರಕ್ಷಣಾ ಕಾರ್ಯ ನಡೆಯುತ್ತದ್ದು, ಈ ಕಾರ್ಯ ಮಾಡಲು ಸಂಯಮ ಬಳ ಮುಖ್ಯವಾಗಿದೆ. ಆದರಿಂದ ಅಂದಾಜು ಸರಿ ಸುಮಾರು ಈ ವರ್ಷದ ಅಂತ್ಯದ ವರೆಗು ಈ ಕಾರ್ಯ ನಡೆಯಲಿದೆ ಎನ್ನಲಾಗಿದೆ.

About Author

Leave a Reply

Your email address will not be published. Required fields are marked *