ಮೈಸೂರಿನಲ್ಲಿ ಶುರುವಾಯ್ತು ರಾತ್ರಿ ಗಸ್ತು- ಪೊಲೀಸ್ ಆಯುಕ್ತರೇ ಎಂಟ್ರಿ ಕೊಟ್ರು ಪರಿಶೀಲನೆಗೆ!
1 min readಮೈಸೂರಿನ ನಿರ್ಜನ ಪ್ರದೇಶದಲ್ಲಿ ಗ್ಯಾಂಗ್ ರೇಪ್ ಪ್ರಕರಣದಿಂದ ಎಚ್ಚೆತ್ತಿರುವ ಮೈಸೂರು ನಗರ ಪೊಲೀಸರು ನಿರ್ಜನ ಪ್ರದೇಶಗಳಲ್ಲಿ ಗಸ್ತು ಆರಂಭಿಸಿದ್ದಾರೆ. ಬೆಳಗ್ಗೆ ಗಸ್ತು ಹೆಚ್ಚು ಮಾಡಿರುವುದಾಗಿ ಹೇಳಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಅವರು ಇಂದು ಖುದ್ದು ಅವರೇ ನಿರ್ಜನ ಪ್ರದೇಶಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನ ಮುಡಾ ವ್ಯಾಪ್ತಿಗೆ ಬರುವ ರಿಂಗ್ ರಸ್ತೆಯ ವ್ಯಾಪ್ತಿಯಲ್ಲಿರುವ ಹೊಸ ಬಡಾವಣೆ, ನಿರ್ಜನ ಸ್ಥಳಗಳನ್ನ ಇಂದು ವೀಕ್ಷಣೆ ನಡೆಸಿದರು. ಈ ವೇಳೆ ಸಂಬಂಧ ಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಪೊಲೀಸ್ ಆಯುಕ್ತರು, ಯಾವುದೇ ಕಾರಣಕ್ಕು ಬೀಟ್ ಸಿಸ್ಟಮ್ ನಲ್ಲಿ ಕೊರತೆ ಆಗದಂತೆ ಕ್ರಮಕ್ಕೆ ಸೂಚಿಸಿದರು.
ಇನ್ನು ಬೆಳಗ್ಗೆಯಷ್ಟೇ ಮಾತಾನಾಡಿದ ಪೊಲೀಸ್ ಆಯುಕ್ತರು ಮೈಸೂರಿನ ಎಲ್ಲಾ ನಿರ್ಜನ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಿದ್ದು, ಜನರಿಗೆ ತಿಳುವಳಿಕೆ ಮೂಡಿಸುತ್ತಿದ್ದೆವೆ. ಯಾವುದೋ ಒಂದು ಕಡೆ ಪ್ರಕರಣ ಆದಾಗ ಆ ಪ್ರದೇಶಕ್ಕೆ ಮಾತ್ರ ಗಸ್ತು ಸಿಮೀತವಾಗುವುದಿಲ್ಲ. ಎಲ್ಲಾ ಕಡೆಗೂ ಗಸ್ತು ಹೆಚ್ಚಳಕ್ಕೆ ಸೂಚಿಸಿದ್ದೆವೆ. ಕೇವಲ ಪೊಲೀಸರ ಜವಬ್ದಾರಿ ಎಂದು ಸಾರ್ವಜನಿಕರು ಮೈ ಮರೆಯಬಾರದು.
ಅಪರಾಧ ನಡೆಯದಂತೆ ತಡೆಯಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಯಾವುದೇ ವಿಚಾರದಲ್ಲೂ ಸಹ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿಕೆ ನೀಡಿದ್ರು. ಇನ್ನು ರಾತ್ರಿ ಗಸ್ತಿನ ವೇಳೆ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಕುವೆಂಪು ನಗರ ಠಾಣೆ ಇನ್ಸ್ ಪೆಕ್ಟರ್ ಷಣ್ಮುಖಂ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.