ಎಲ್ಲೆ ಮತಾಂತರ ನಡೆದರು ಅದನ್ನ ಮಟ್ಟ ಹಾಕುವ ಕೆಲಸ ಮಾಡ್ತಿವಿ: ಸಂಸದ ಪ್ರತಾಪ್ ಸಿಂಹ
1 min readಮೈಸೂರು: ದೇಗುಲಗಳ ಉಳಿವಿಗೆ ಹೊಸ ವಿದೇಯೆಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಗು ಮುನ್ನ ಮೈಸೂರಿನ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಪೂಜೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 101 ಗಣಪತಿಗೆ ನಮ್ಮ ಕೋರಿಕೆ ನೆರವೇರಿಸಿದಕ್ಕೆ ಧನ್ಯವಾದ ಅರ್ಪಿಸಿದ್ದೇವೆ. ಸೆ.9ಕ್ಕೆ ಕೆಡಿಪಿ ಸಭೆಯಲ್ಲಿ ಹುಚ್ಚಗಣಿ ದೇಗುಲ ತೆರವು ಮಾಡಿದ್ದ ಬಗ್ಗೆ ಮಾತನಾಡಿದ್ದೆ. ನಾವು ಈ ಬಳಿ ಗಣೇಶನ ಬಳಿ ಬಂದು ಬೇಡಿಕೊಂಡಿದ್ದೇವು. ಇಂದು ನಮ್ಮ ಈ ಬೇಡಿಕೆ ಈಡೇರಿದೆ. ನಮಗೆ ಬಹಳ ಉತ್ತಮವಾದ ಮುಖ್ಯಮಂತ್ರಿಗಳು ಸಿಕ್ಕಿದ್ದಾರೆ. ವಿದೇಯಕ ಮಂಡಿಸಿ ಅದನ್ನ ಪಾಸ್ ಮಾಡಿದ್ದಾರೆ. ಇದರಿಂದ ನಮ್ಮ ದೇಗುಲಗಳ ಉಳಿವಿಗೆ ಹೊಸ ಕಾಯ್ದೆ ಸಿಕ್ಕಿದೆ. ಇದು ನಮಗೆ ಅತ್ಯಂತ ಸಂತಸದ ವಿಚಾರವಾಗಿದೆ. ಹುಚ್ಚಗಣಿ ದೇಗುಲದ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಬೇಕಿದೆ. ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಬರುತ್ತಾರೆ. ಜನರು ಹಾಗೂ ಸರ್ಕಾರ ದೇಣಿಗೆ ನೀಡಿದ್ರೆ ದೇಗುಲ ಕಟ್ಟಲು ಅನುಕೂಲ ಆಗಲಿದೆ ಅಂತ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಗೂಳಿಹಟ್ಟಿ ಶೇಖರ್ ಒಬ್ಬ ಜನಪ್ರತಿನಿಧಿ. ಅವರೇ ತಾಯಿಯೇ ಮತಾಂತರಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ. ಜನರನ್ನ ಮೋಸ ಮಾಡಿ, ಮರಳು ಮಾಡಿ ಮತಾಂತರ ಮಾಡೋದು ತಪ್ಪು. ನಾನು ಕೂಡ ಮತಾಂತರದ ವಿರೋಧಿ. ನಾನು ಪತ್ರಕರ್ತನಾಗಿದ್ದ ವೇಳೆಯೇ ಈ ಬಗ್ಗೆ ಬರೆದಿದ್ದೆ. ಮತಾಂತರ ಮಾಡುತ್ತಿದ್ದವರಿಗೆ ಆತಂಕ ಇರುತ್ತೆ. ಪಾದ್ರಿಗಳಿಗೇ ಏಕೆ ಈ ಚಡಪಡಿಕೆ, ಆತಂಕ. ಯಾಕೆ ಏಕಾಏಕಿ ಹೋಗಿ ಸಿಎಂಗೆ ಮನವಿ ಮಾಡಿದ್ದಾರೆ. ಮರಳು ಮಾಡುವಂತ ಈ ಮತಾಂತರ ನಿಷೇಧ ಆಗಬೇಕು. ಲಾರಿಯಲ್ಲಿ ತುಂಬಿಕೊಂಡು ಹೋಗಿ ಗಿಫ್ಟ್ ಕೊಡ್ತಾರೆ. ಯಾಕೆ ಇದೆಲ್ಲ ಮಾಡಬೇಕು? ಮೊದಲು ಮತಾಂತರ ನಿಲ್ಲಬೇಕು ಅಂತ ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಪ್ರತಾಪ್ ಸಿಂಹ ಹೇಳಿದ್ದಾರೆ.
ಕಾಳ ಸಂತೆಯಲ್ಲಿ ಕಳ್ಳತನದ ಮಾಲು ಸೆಲ್ ಆಗುತ್ತೆ. ನೀವ್ಯಾಕೆ ಕೇರಿಗಳಿಗೆ ಹೋಗಿ ಗಿಫ್ಟ್ ಕೊಡ್ತಿರಾ.! ಜನರನ್ನ ಯಾಕೆ ಮರಳು ಮಾಡುವ ಕೆಲಸ ಮಾಡ್ತೀರಾ. ನೀವೂ ಚಿಕಿತ್ಸೆ ಕೊಡಿ, ಅದು ಬಿಟ್ಟು ಮ್ಯಾಜಿಕ್ ಮಾಡಬೇಡಿ. ಚಿಕಿತ್ಸೆ ಕೊಡಬೇಕು ಅಂದ್ರೆ ಮೊದಲು ಏಸು ಸ್ವಾಮಿಗೆ ಪೂಜೆ ಮಾಡಿ ಅಂತಾರೆ. ಬಳಿಕ ಚಿಕಿತ್ಸೆ ಕೊಟ್ಟು ಏಸು ಸ್ವಾಮಿಯೇ ಕಾಪಾಡಿದ್ದು ಅಂತೀರಾ. ಹೀಗೆ ಮರಳು ಮಾಡಿ ಮತಾಂತರ ಮಾಡುವುದು ನಡೆದಿದೆ. ಇದು ಸರಿಯಾದ ಕ್ರಮ ಅಲ್ಲ- ಇದೆಲ್ಲವೂ ನಾವು ಕೂಡ ನೋಡಿದ್ದೇವೆ.
ಮದರ್ ತೆರೇಸಾ ಅವರನ್ನು ಸಂತ ಪದವಿಗೆ ಹೋಗುವ ಮೊದಲು ಮ್ಯಾಜಿಕ್ ಮಾಡಲು ಹೇಳಲಾಗಿತ್ತು. ನಮ್ಮಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ನಾವು ಬೆಲೆ ಕೊಡುತ್ತೇವೆ. ಆದರೆ ಮದರ್ ತೆರೇಸಾ ಅವರಿಂದ ಮ್ಯಾಜಿಕ್ ಮಾಡಿ ಸಂತರನ್ನಾಗಿ ಮಾಡಲಾಯ್ತು. ಇದು ಮಂದಿನಾ ಮಂಗ್ಯಾ ಮಾಡುವ ತಂತ್ರ. ಈಗಲೂ ಅದನ್ನೇ ಮತಾಂತರಕ್ಕೆ ಬಳಸಲಾಗುತ್ತಿದೆ. ನಮ್ಮ ಧರ್ಮ ಶ್ರೇಷ್ಟತೆಯನ್ನು ನಂಬಿದವರು. ನಾವು ಆಕ್ರಮಣ ಪ್ರಹಾರ ಮಾಡುವುದಿಲ್ಲ. ಆದರೆ ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮಗೆ ಇದೆ. ರಾಜ್ಯದ ಯತಿಗಳು ಮತಾಂತರದ ವಿರುದ್ದ ಹೋರಾಟವನ್ನು ಮಾಡಬೇಕು ಅಂತ ಪ್ರತಾಪಸಿಂಹ ಹೇಳಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತಾಂತರ ನಡೆದರು ನಾವು ಬಿಡಲ್ಲ. ಎಲ್ಲೆ ಮತಾಂತರ ನಡೆದರು ಅದನ್ನ ಮಟ್ಟ ಹಾಕುವ ಕೆಲಸ ಮಾಡ್ತಿವಿ.
ಚಾಣಾಕ್ಯ ವಿವಿ ಸ್ಥಾಪನೆಗೆ ಭೂಮಿ ನೀಡುವ ವಿಚಾರಕ್ಕೆ ಕಾಂಗ್ರೆಸ್ ವಿರೋಧ ವಿಚಾರ: ಕಾಂಗ್ರೆಸ್ ವಿರೋಧಕ್ಕೆ ಸಂಸದ ಪ್ರತಾಪಸಿಂಹ ತಿರುಗೇಟು. ಕಾಂಗ್ರೆಸ್ ಇರೋದೆ ಆ ರೀತಿಯಲ್ಲಿ. ಬ್ರಿಟಿಷರ ಮನಸ್ಥಿತಿ ಇನ್ನು ಅವರಲ್ಲಿದೆ. ಅವರಲ್ಲಿ ಇನ್ನು ದಾಸ್ಯದ ಮನಸ್ಥಿತಿ ಇದೆ. ನಮ್ಮ ಭಾರತೀಯತೆ ಭಾರತೀಯ ರಾಜಕೀಯ ವಿಚಾರಗಳ ಬಗ್ಗೆ ಗೌರವ, ಪ್ರೀತಿ ವ್ಯಾಮೋಹ ಸಹಾ ಇಲ್ಲ. ಬಹುಶಃ ಅವರಿಗೆ ಚಾಣಕ್ಯ ಬಗ್ಗೆ ಗೊತ್ತಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ಪಾತಾಳ ಸೇರುತ್ತಿರುವ ಕಾಂಗ್ರೆಸ್ ನೀತಿ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು ಅಂತ ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ ಹೇಳಿಕೆ ನೀಡಿದ್ದಾರೆ.