ಶ್ವಾನಗಳಿಗೆ ಉಚಿತ ಲಸಿಕಾ ಶಿಬಿರ ಉದ್ಘಾಟಿಸಿದ ಶಾಸಕ ಎಸ್.ಎ.ರಾಮದಾಸ್
1 min readಮೈಸೂರು.ಸೆ.20-ಪಶುಸಂಗೋಪನೆ ಇಲಾಖೆ , ಪ್ರಾಣಿ ದಯಾ ಸಂಘ ಹಾಗೂ ಮೈಸೂರು ಡಾಗ್ ಬ್ರೀಡರ್ಸ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಶ್ವಾನಗಳಿಗೆ ಉಚಿತ ಲಸಿಕಾ ಶಿಬಿರವನ್ನು ಶಾಸಕ ಎಸ್.ರಾಮದಾಸ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಾವೆಲ್ಲರೂ ಕೊರೊನಾ ಸಂದರ್ಭದಲ್ಲಿ ನಿರಂತರ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ. ಈಗೀಗ ಸ್ವಲ್ಪ ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯಲ್ಲಿ 2 ತಿಂಗಳ ಕಾಲ ಊಟವನ್ನು ನೀಡಿದ್ದೆವು. ಅದೇ ಸಂದರ್ಭದಲ್ಲಿ ಮೈಸೂರಿನ 25 ಕಡೆ ಬೀದಿ ನಾಯಿಗಳಿಗೂ ಊಟವನ್ನು ಹಾಕಿದ್ದೆವು. ಮೈಸೂರಿನಲ್ಲಿರುವ ಯಾರ್ಯಾರು ಶ್ವಾನ ಪ್ರಿಯರಿದ್ದಾರೋ ಅವರೆಲ್ಲರೂ ಸೇರಿ ಒಂದು ಅಸೋಸಿಯೇಷನ್ ಮಾಡಿಕೊಳ್ಳಬೇಕು ನಾವು ಈ ಮೂಲಕ ಮಾದರಿಯ ರೀತಿಯಲ್ಲಿ ಶ್ವಾನಗಳಿಗೆ ರೀ ಹ್ಯಾಬಿಲಿಟೇಶನ್ ಸೆಂಟರ್ ಅನ್ನೂ ಮಾಡಲು ಹೊರಟಿದ್ದೇವೆ. ಇದಕ್ಕಾಗಿಯೇ 4 ಎಕರೆ ಭೂಮಿ ಹಾಗೂ 2 ಕೋಟಿ ರೂ. ಗಳನ್ನು ಕೊಡುವ ಕೆಲಸ ನಾವು ಮಾಡುವವರಿದ್ದೇವೆ ಎಂದರು.
ಶ್ವಾನಗಳಿಗೆ ರೀ ಹ್ಯಾಬಿಲಿಟೇಶನ್ ಸೆಂಟರ್ ಮೂಲಕ ಮಾದರಿ ಕಾರ್ಯವನ್ನು ಮಾಡಿ ಈ ಪ್ರಾಜೆಕ್ಟ್ ಅನ್ನು ಕೇಂದ್ರಕ್ಕೆ ತಿಳಿಸುವ ಕೆಲಸ ಮಾಡೋಣ ಎಂದರು.