ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮೋದಿ!
1 min readಮೈಸೂರು : ಮೈಸೂರು ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಆಚರಣೆ ಸಂಬಂಧ ಇಂದು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಅಧಿಕಾರಿಗಳ ಪ್ರಾಥಮಿಕ ಸಭೆ ನಡೆಸಲಾಯಿತು. ಪಾರಂಪರಿಕ ಕಟ್ಟಡಗಳು ಸಾಕಷ್ಟು ಶಿಥಿಲಾವಸ್ಥೆ ತಲುಪಿದ್ದು 90 ಕೋಟಿ ಅನುದಾನದಲ್ಲಿ ಕೆ.ಆರ್.ಆಸ್ಪತ್ರೆ, ಮೆಡಿಕಲ್ ಕಾಲೇಜಿನ ನವೀಕರಣಕ್ಕೆ ಅನುಮೋದನೆ ನೀಡಲಾಗುವುದು ಎಂದರು. ಏ.1 ರಿಂದ ಮೂರು ಕಟ್ಟಡದ ನವೀಕರಣ ಆಗಬೇಕಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ನೀಡಿರುವ ಅನುದಾನ ಬಳಕೆಯಾಗುವುದು ಎಂದರು. ಅಲ್ಲದೆ ಈಗಾಗಲೇ ಮೈಸೂರು ಮೆಡಿಕಲ್ ಕಾಲೇಜಿನಿಂದ ಬರೋಬ್ಬರಿ 90 ಸಾವಿರ ವಿದ್ಯಾರ್ಥಿಗಳು ಕಲಿತು ದೇಶ ವಿದೇಶಗಳಿಗೆ ಹೋಗಿದ್ದಾರೆ. ಅವರನ್ನ ಕರೆತಂದು ಸನ್ಮಾನ ಮಾಡಿ ಅವರಿಂದಲು ಅಭಿವೃದ್ಧಿ ಸಹಕಾರ ಕೇಳುತ್ತೇವೆ ಎಂದರು. ಇದರ ಪೂರ್ವಭಾವಿಯಾಗಿಯೇ ಈ ಸಭೆ ನಡೆಸಿದ್ದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿಸ್ತೃತವಾದ ಸಭೆ ನಡೆಯಲಿದೆ ಎಂದರು.
- ಶತಮಾನೋತ್ಸವ ಸಮಾರಂಭಕ್ಕೆ ಪ್ರಧಾನಿ ಮೋದಿ.
ಮೈಸೂರು ವಿವಿಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ಪ್ರಧಾನಿ ಮೋದಿ ಅವರು ಕೋವಿಡ್ ಕಾರಣದಿಂದ ಲೈವ್ ಮೂಲಕವೇ ಕಾರ್ಯಕ್ರಮ ಉದ್ಘಾಟನೆಗೆ ಸಾಕ್ಷಿಯಾದರು ಆದರೆ ನಾವು ರಾಜ್ಯದ ಮೊದಲ ಶತಮಾನೋತ್ಸವ ಆಚರಿಸಿಕೊಳ್ತಿರೋ ಮೆಡಿಕಲ್ ಕಾಲೇಜಿಗೆ ಅವರನ್ನ ಆಹ್ವಾನಿಸಲು ಸಿದ್ದತೆ ನಡೆಸಿದ್ದೇವೆ. ಅವರಿಂದಲೇ ಉದ್ಘಾಟನೆ ಕೂಡ ಮಾಡಿಸುತ್ತೇವೆ ಎಂದರು.
ಮೋದಿ ಅವರಿಗೆ ಕ್ರೆಡಿಟ್ ಬರಬೇಕು- ನನಗೆ ಯಾರೆ ಕೆಲಸ ಹೇಳಿದರು ಮಾಡಿಕೊಡುವೆ.!
ಇನ್ನು ಬೆಂಗಳೂರು – ಮೈಸೂರು ಹೈವೆ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು ಹಲವು ಸಬ್ ವೇ, ಸೇತುವೆಯನ್ನು ಜನರ ಮನವಿಗೆ ಅನುಗುಣವಾಗಿ ಮಾಡಿಸಿದ್ದೇನೆ. ಮೈಸೂರಿಗೆ ಹೈವೆ ತರುತ್ತಿದ್ದೇನೆ. ಮಧ್ಯೆ ಏನಾದರೂ ಸಮಸ್ಯೆಯಾದರೆ ಆದನ್ನು ಪರಿಹರಿಸುವ ಜವಾಬ್ದಾರಿ ನನ್ನದು. ಅದೇ ಕೆಲಸ ನಾನು ಮಾಡುತ್ತಿದ್ದೇನೆ. ಜನ ಕೆಲಸ ಮಾಡಿ ಕೊಡಿ ಅಂತಾ ಕೇಳಿದರೆ ಯಾರಿಗೂ ಇಲ್ಲ ಅನ್ನಲ್ಲ. ಕೆಲಸ ಮಾಡಿಕೊಟ್ಟರೆ ಜನ ನಾಲ್ಕು ಒಳ್ಳೆ ಮಾತಾಡುತ್ತಾರೆ. ಅದನ್ನೇ ಕ್ರೆಡಿಟ್ ಅಂದರೆ ಏನೂ? ನನ್ನ ಕ್ಷೇತ್ರಕ್ಕೆ ಸಂಬಂಧ ಇರದ ಕ್ಷೇತ್ರದವರು. ಏನಾದರೂ ಕೆಲಸ ಮಾಡಿ ಕೊಡಿ ಅಂತಾ ಕೇಳುತ್ತಾರೆ. ನಾನು ನನ್ನ ಕೈಯಲ್ಲಿ ಸಾಧ್ಯವಾದರೆ ಮಾಡಿ ಕೊಡುತ್ತೇನೆ, ಇದರಲ್ಲಿ ತಪ್ಪೇನಿದೆ? ಎಂದರು.
ಸುಮಲತಾ ಅವರ ಬಗ್ಗೆ ನಾನು ಮಾತಡಲ್ಲ!
ಇನ್ನು ಕ್ರೆಡಿಟ್ ಹಾಗೂ ಅಸಮರ್ಪಕ ಕಾಮಗಾರಿ ಎಂಬ ಆರೋಪಗಳಿಗೆ ನಾನು ವೈಯಕ್ತಿಕವಾಗಿ ಉತ್ತರ ಕೊಡಲ್ಲ. ಯಾರಿಗೆ ಏನೇ ಸಮಸ್ಯೆ ಇದ್ದರೆ ನೇರವಾಗಿ ನನ್ನನೇ ಕೇಳಲಿ. ನಾನು ಆ ಸಮಸ್ಯೆ ಬಗ್ಗೆ ಗಮನ ಹರಿಸುತ್ತೇನೆ. ಈಗಾಗಲೇ ಸಾಕಷ್ಟು ಹಿರಿಯರು ಸಮಸ್ಯೆ ಹೇಳಿದ್ದಾರೆ. ನಾನೇ ಖುದ್ದಾಗಿ ಹೋಗಿ ಸಮಸ್ಯೆ ಬಗೆಹರಿಸಿದ್ದೇನೆ. ಹಾಗಂತ ನಾನು ಯಾರನ್ನ ತೆಗಳುವುದಿಲ್ಲ. ನಾನು ಮಾಡುವ ಕೆಲಸದಿಂದ ಮೋದಿ ಜೀ ಅವರ ನಮ್ಮ ಸರ್ಕಾರಕ್ಕೆ ಒಳ್ಳೆ ಹೆಸರು ಬರಬೇಕು ಎಂದರು.