ಹಿರಿನಾಗರೀಕರು, ವಿಧವೆಯರು, ಅಂಗವಿಕಲರ ಹಣಕ್ಕಾಗಿ ಧ್ವನಿ ಎತ್ತಿದ ಕೆ.ಎಂ. ನಿಶಾಂತ್: ಸಮಸ್ಯೆ ಶೀಘ್ರ ಬಗೆಹರಿಸಲು ಸರ್ಕಾರಕ್ಕೆ ಮನವಿ
1 min readಮೈಸೂರು: ಹಿರಿಯನಾಗರೀಕರು, ವಿಧವೆಯರು, ಅಂಗವಿಕಲ ಪಿಂಚಣಿದಾರರ ಪಿಂಚಣಿ ಪಾವತಿಯಲ್ಲಿ ಆಗಿರುವ ಸಮಸ್ಯೆಯನ್ನು ಶೀಗ್ರವಾಗಿ ಬಗೆಹರಿಸಬೇಕೆಂದು ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರು, ಸಾಮಾಜಿಕ ಹೋರಾಟಗಾರರಾದ ಕೆ.ಎಂ. ನಿಶಾಂತ್ ರವರು ಮೈಸೂರಿನ ಜಿಲ್ಲಾಧಿಕಾರಿಗಳ ಮೂಲಕವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಕೆ.ಎಂ. ನಿಶಾಂತ್ ರವರು, ಸರ್ಕಾರ ಬಿಡುಗಡೆ ಮಾಡುವ ಹಣ ಅಥವ ಒಂದು ಸದುದ್ದೇಶಕಾಗಿ ಬಜೆಟ್‍ನಲ್ಲಿ ಮೀಸಲಿಟ್ಟಿರುವ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದಕ್ಕೆ ಉದಾಹರಣೆಎಂಬಂತೆ ಹಿರಿಯ ನಾಗರೀಕರಿಗೆ, ವಿದವೆಯರಿಗೆ, ಅಂಗವಿಕಲರಿಗೆ ಸಮಾಜಿಕ ಮತ್ತು ಆರ್ತಿಕ ಭದ್ರತೆಯನ್ನ ಒದಗಿಸುವ ಉದ್ದೇಶದಿಂದ ಸರ್ಕಾರ ಕೊಡುವಂತಹ ಪಿಂಚಣಿ ಹಣ ಕಳೆದ ಒಂದುವರೆ ವರ್ಷದಿಂದ ಸಮರ್ಪಕವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬರುತ್ತಿಲ್ಲ.
ನಮ್ಮ ರಾಜ್ಯದಲ್ಲಿ 60 ರಿಂದ 65 ವರ್ಷದ ವರೆಗಿನ ಹಿರಿಯನಾಗರೀಕರಿಗೆ ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆಯ ಮೂಲಕವಾಗಿ ತಿಂಗಳಿಗೆ 600.ರೂ, 65 ಮರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಸಂದ್ಯಾಸುರಕ್ಷಾ ಯೊಜನೆಯ ಮೂಲಕವಾಗಿ ತಿಂಗಳಿಗೆ 1000ರೂ, ವಿದವೆಯರಿಗೆ ವಿದವಾವೇತನ ಅಂತ 600ರೂ, ಶೇಕಡ 75ಕ್ಕಿಂತ ಹೆಚ್ಚು ಅಂಗವಿಕಲತೆಯನ್ನ ಹೊಂದಿರುವಂತವರಿಗೆ 600ರೂ ಗಳನ್ನ ಅಂಗವಿಲರ ವೇತನವೆಂದು ಕೊಡುತ್ತಾರೆ. ಒಟ್ಟು ಈ ರೀತಿ ಪಿಂಚಣಿ ಹಣವನ್ನೇ ನೆಚ್ಚಿಕೊಂಡಿರುವಂತಹ ಸುಮಾರು 35 ಲಕ್ಷ ಫಲಾನುಭವಿಗಳು ರಾಜ್ಯದಲ್ಲಿದ್ದಾರೆ. ಎಷ್ಟೋ ಜನ ಹಿರಿಯ ನಾಗರೀಕರು, ಅಂಗವಿಕಲರು ಈ ಹಣವನ್ನು ತಮ್ಮ ತಿಂಗಳ ಔಷಧಿ ಕರ್ಚಿಗಾಗಿ ಬಳಸುತ್ತಾರೆ, ಕನಿಷ್ಠಪಕ್ಷ ಸಂಭಂದಿಕರ ಮೇಲೆ ಅವಲಂಭಿತವಾಗದೆ ಸ್ವಾವಲಂಭಿಯಾಗಿ ಬದುಕಲು ಈ ಹಣ ಉಪಯೋಗವಾಗುತ್ತದೆ. ವಿಧವೇಯರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೋ ಅಥವಾ ಮನೆಯ ಸಣ್ಣ ಪುಟ್ಟ ಕರ್ಚುಗಳನ್ನು ಸಂಬಾಳಿಸಲು ಈ ಹಣ ಉಪಯುಕ್ತವಾಗ್ತಿತ್ತು.
ಆದರೆ ಪ್ರತೀ ತಿಂಗಳ 2ನೇ ವಾರದ ಒಳಗಾಗಿ ಖಾತೆಗೆ ಜಮೆಯಾಗುತ್ತಿದ್ದ ಪಿಂಚಣಿ ಹಣ 2020 ಫೆಬ್ರವರಿ ಇಂದ ಬಹುತೇಕರಿಗೆ ನಿಂತುಹೋಗಿದೆ. ಈ ಪಿಂಚಣಿ ಯೋಜನೆಗಳಿಗೆ ಹೊಸದಾಗಿ ನೊಂದಾಯಿತರಾದ ಕೆಲವರಿಗೆ ಆದೇಶ ಪ್ರತಿ ದೊರಕಿ 5-6 ತಿಂಗಳುಗಳಾದರೂ ಇನ್ನೂ 1 ತಿಂಗಳ ಹಣವೂ ಸಹ ಬಂದಿಲ್ಲ. ಹಲವು ವರ್ಷಗಳಿಂದ ಪಿಂಚಿಣಿ ಪಡೆಯುತ್ತಿದ್ದ ಕೆಲ ಫಲಾನುಭವಿಗಳ ಪಿಂಚಣಿ ಪಾವತಿಯ ಆದೇಶ ಸಂಖ್ಯೆ (PPO Number) ಯನ್ನು ಏಕಾಏಕಿ ಯಾವ ಕಾರಣವೂ ಇಲ್ಲದೆ ರದ್ದುಗೊಳಿಸಲಾಗುತ್ತಿದೆ.
ಈ ಬಗ್ಗೆ ಫಲಾನುಭವಿಗಳು, ವೃದ್ಧರು ಸ್ಥಳೀಯ ತಹಶಿಲ್ದಾರ್ ಕಚೇರಿ, ಜಿಲ್ಲಾ ಖಜಾನೆಗಳಲ್ಲಿ ಪ್ರಶ್ನಿಸಿದರೂ ಸರಿಯಾದ ಸ್ಪಂದನೆ ಮತ್ತು ಸೂಕ್ತ ಕಾರಣ ಸಿಗುತ್ತಿಲ್ಲ. ಇದರಿಂದ ಕೋವಿಡ್19 ನ ಈ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರದ ಪಿಂಚಿಣಿ ಹಣವನ್ನೇ ನೆಚ್ಚಿಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆಯಲ್ಲಿರುವ ಲಕ್ಷಾಂತರ ಫಲಾನುಭವಿಗಳ ರೋದನೆ ಹೇಳತೀರದಾಗಿದೆ.
ಹಾಗಾಗಿ ಆದ್ಯತೆಯಮೇರೆಗೆ ತುರ್ತಾಗಿ ಈ ಸಮಸ್ಯೆಯನ್ನು ಬಗೆಹರಿಸಿ ಹಲವು ತಿಂಗಳುಗಳಿಂದ ಪಾವತಿಯಾಗದೆ ಬಾಕಿ ಉಳಿದಿರುವ ಪಿಂಚಣಿ ಹಣವನ್ನು ಅರಿಯರ್ಸ್ ರೂಪದಲ್ಲಿ ಪಾವತಿಸಿ ಸಹಜವಾಗಿ ಈ ಪ್ರಕ್ರಿಯೆ ಮುಂದುವರೆಯುವಂತೆ ನಿಗಾವಹಿಸಬೇಕು ಮತ್ತು ಕಾರಣವಿಲ್ಲದೆ ರದ್ದುಗೊಳಿಸಿರುವ ಪಾವತಿ ಆದೇಶ ಸಂಖ್ಯೆಗಳನ್ನು ಸಕ್ರೀಯಗೊಳಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಶೀಗ್ರವಾಗಿ ಈ ಸಮಸ್ಯೆಯನ್ನು ಪರಿಹರಿಸುವುದಾಗಿ ಬರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.