ಕಬಿನಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ: ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ಸೂಚಿಸಿದ ಅಧಿಕಾರಿಗಳು
1 min read
ಮೈಸೂರು: ಕಬಿನಿ ಡ್ಯಾಂನಿಂದ 30800 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದ್ದು, ಕಬಿನಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಡ್ಯಾಂ.
ಡ್ಯಾಂಗೆ ಒಳಹರಿವು ಕೂಡ ಹೆಚ್ಚಳವಾಗಿದೆ. ಡ್ಯಾಂಗೆ 24 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಬಿನಿ ನದಿ ಪಾತ್ರದಲ್ಲಿ ವ್ಯಾಪಕ ಮಳೆ ಹಿನ್ನಲೆ. ಒಳ ಹರಿವಿನಲ್ಲಿ ಹೆಚ್ಚಳವಾಗಿದೆ.

ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ತಗ್ಗು ಪ್ರದೇಶಗಳಿಗೆ ತೆರಳುವಂತೆ ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ. ಕೊರೊನಾ ನಡುವೆ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
ಒಳ ಹರಿವು ಹೆಚ್ಚಾದರೆ ಹೊರ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳ ಸಾಧ್ಯತೆ ಇದೆ. ಇದರಿಂದ ನಂಜನಗೂಡು, ಸುತ್ತೂರು ವ್ಯಾಪ್ತಿಯಲ್ಲಿ ಸೇತುವೆ ಮುಳುಗುವ ಭೀತಿ ಎದುರಾಗಿದೆ. ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ ಅಧಿಕಾರಿಗಳು.
ನಂಜನಗೂಡಿನಲ್ಲಿ ತುಂಬಿ ಹರಿಯುತ್ತಿರುವ ಕಪಿಲಾ ನದಿ
ದಕ್ಷಿಣಕಾಶಿ ನಂಜನಗೂಡಿನಲ್ಲಿ ತುಂಬಿ ಹರಿಯುತ್ತಿರುವ ಕಪಿಲಾ ನದಿ. ಕಬಿನಿ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾದ ಹಿನ್ನೆಲೆ ತುಂಬಿ ಹರಿಯುತ್ತಿರುವ ಕಪಿಲೆ.
ಕಪಿಲಾ ನದಿಯ ಅಂಚಿನಲ್ಲಿರುವ ಸ್ನಾನಘಟ್ಟದ ಮೆಟ್ಟಿಲುಗಳು ಮುಳುಗಡೆ. ಹದಿನಾರು ಕಾಲು ಮಂಟಪ ಮುಳುಗಡೆಯತ್ತ.
ಮತ್ತೆ ನಂಜನಗೂಡಿನ ಜನತೆಯಲ್ಲಿ ಪ್ರವಾಹದ ಆತಂಕ.
ನಂಜನಗೂಡು ಪಟ್ಟಣದ ತೋಪಿನಬೀದಿ, ಒಕ್ಕಲಗೇರಿ ಹಳ್ಳದಕೇರಿ, ಗೌರಿಘಟ್ಟ ಬೀದಿ ಬಡಾವಣೆಗಳಿಗೆ ಕಳೆದ ಬಾರಿ ನೀರು ತುಂಬಿತ್ತು. ಇದೀಗಾ ಕಬಿನಿಯಿಂದ 30 ಸಾವಿರ ಕ್ಯೂಸೆಕ್ ಹೊರ ಹರಿವು.
ಹೊರಹರಿವು ಮತ್ತಷ್ಟು ಹೆಚ್ಚಾದರೆ ಪ್ರವಾಹ ಆತಂಕ ಎದುರಾಗಿದೆ.