ಲಾಕ್ಡೌನ್: ಮೈಸೂರಿನಲ್ಲಿ ಖುದ್ದು ಫೀಲ್ಡ್ಗೆ ಇಳಿದ ಡಿಸಿಪಿ ಗೀತಾ ಪ್ರಸನ್ನ
1 min readಮೈಸೂರು: ಅನಗತ್ಯ ಸಂಚಾರ ನಡೆಸಿದ ವಾಹನ ಸವಾರರಿಗೆ ಮೈಸೂರಿನ ಡಿಸಿಪಿ ಗೀತಾ ಪ್ರಸನ್ನ ಶಾಕ್ ನೀಡಿದ್ದು ಖುದ್ದು ಫೀಲ್ಡ್ಗೆ ಇಳಿದು ತಪಾಸಣೆ ನಡೆಸಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಸಾಕಷ್ಟು ವಾಹನ ಸಂಚಾರ ಹಿನ್ನಲೆ ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೃತ್ತದಲ್ಲಿ ಡಿಸಿಪಿ ಗೀತಾ ಪ್ರಸನ್ನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅನಗತ್ಯ ಸಂಚಾರ ಮಾಡಿದ ಹಲವು ವಾಹನಗಳು ಸೀಜ್ ಮಾಡಿದ್ದಾರೆ. ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ ಸವಾರರಿಗೆ ದಂಡ ವಿಧಿಸಿದ್ದಾರೆ.
ಗ್ರಾ.ಪಂ ಸದಸ್ಯನಿಗೆ ದಂಡ
ಇನ್ನು ತಪಾಸಣೆ ವೇಳೆ ಡಿಸಿಪಿ ಗೀತಾ ಪ್ರಸನ್ನ ಅವರು ಗ್ರಾ.ಪಂ ಸದಸ್ಯನಿಗೆ ದಂಡ ವಿಧಿಸಿದ್ದಾರೆ. ಕಾರಿಗೆ ಗ್ಲಾಸ್ಗೆ ಕೂಲಿಂಗ್ ಪೇಪರ್ ಹಾಕಿಕೊಂಡಿದ್ದ ಗ್ರಾ.ಪಂ ಸದಸ್ಯನಿಂದಲೇ ಕೂಲಿಂಗ್ ಪೇಪರ್ ತೆಗೆದು ಹಾಕಿಸಿ ದಂಡ ವಿಧಿಸಿದ ವಿಧಿಸಿದ್ದಾರೆ.
ಮೈಸೂರಿನ ಎನ್.ಆರ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ.