ಕೋವಿಡ್ ಲೆಕ್ಕ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

1 min read

ಮೈಸೂರು: ಮೈಸೂರು ಜಿಲ್ಲೆಯಲ್ಲಿನ ಕೋವಿಡ್ ನಿಯಂತ್ರಣ ಸಂಬಂಧ ಸರಕಾರ ಬಿಡುಗಡೆ ಮಾಡಿದ್ದ ಹಣದ ವೆಚ್ಚದ ವಿವರ ಮೊದಲು ನೀಡಿ ಎಂದ ಪ್ರತಾಪ್ ಸಿಂಹ ಹೇಳಿಕೆಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ 36 ಕೋಟಿಯ ವೆಚ್ಚವನ್ನ ದಾಖಲೆ‌ ಸಮೇತ ಬಿಡುಗಡೆಗೊಳಿಸಿದ್ದಾರೆ.

ನಿನ್ನೆ ಬೆಳಗ್ಗೆಯಷ್ಟೆ ಸಂಸದ ಪ್ರತಾಪ್ ಸಿಂಹ ಮಾಧ್ಯಮದ ಮೂಲಕ ಕೋವಿಡ್ ಲೆಕ್ಕ ನೀಡಲು ಡಿಸಿಗೆ ತಾಕೀತು ಮಾಡಿದ್ದರು. ಆದರೆ ನಿನ್ನೆ ಸಂಜೆ ವೇಳೆಗೆ ಡಿಸಿ ರೋಹಿಣಿ ಸಿಂಧೂರಿ ಮಾಧ್ಯಮಗಳ ಮೂಲಕವೇ ವೆಚ್ಚದ ವಿವರ ನೀಡಿದ್ದು, ಸರ್ಕಾರದ ಕೋವಿಡ್ ನಿರ್ವಹಣೆ ಬಗ್ಗೆ ಖರ್ಚಾದ ಮಾಹಿತಿಯ ದಾಖಲೆ ಬಹಿರಂಗಪಡಿಸಿದ್ದಾರೆ.

ಡುಗಡೆ ಮಾಡಿದ ವೆಚ್ಚದ ವಿವರ:

  1. ಜಿಲ್ಲಾಸ್ಪತ್ರೆ ವೈದ್ಯಕೀಯ ಉಪಕರಣಗಳು, ಔಷಧ, ಪಿಪಿಇ ಕಿಟ್, ಮಾಸ್ಕ್ ಹಾಗೂ ಸ್ಟೇಷನರಿ ಇತ್ಯಾದಿ: 13 ಕೋಟಿ ರೂ.
  2. ಐಸೋಲೇಷನ್ ವ್ಯವಸ್ಥೆ ಮತ್ತು ಕೋವಿಡ್ ಕೇರ್ ಸ್ಥಾಪನೆ ಮತ್ತು ನಿರ್ವಹಣೆ ಇತ್ಯಾದಿ: 5 ಕೋಟಿ ರೂ.
  3. ಕ್ವಾರಂಟೈನ್ ಒಳಪಟ್ಟವರಿಗೆ ಹೋಟೆಲ್ ವಾಸ್ತವ್ಯ, ಅಂದಿನಿಂದ ಇಂದಿನವರೆಗೆ ರೋಗಿಗಳಿಗೆ ಊಟದ ವ್ಯವಸ್ಥೆ: 4 ಕೋಟಿ ರೂ.
  4. ಮೈಸೂರು ಮೆಡಿಕಲ್ ಕಾಲೇಜಿಗೆ ಟೆಸ್ಟಿಂಗ್ ಮೆಟಿರಿಯಲ್ಸ್: 7 ಕೋಟಿ ರೂ.
  5. ಸ್ವಾಬ್ ಕಲೆಕ್ಷನ್ ಮತ್ತು ಹೊರಗುತ್ತಿಗೆ ಸಿಬ್ಬಂದಿ: 1 ಕೋಟಿ ರೂ.
  6. ವ್ಯಾಕ್ಸಿನೇಷನ್ ಮತ್ತು ಟೆಸ್ಟಿಂಗ್ ವಾಹನ ವ್ಯವಸ್ಥೆ: 4 ಕೋಟಿ ರೂ.
  7. ಆಮ್ಲಜನಕ ಪೂರೈಕೆ: 1 ಕೋಟಿ ರೂ.
  8. ಇತರೆ ವೆಚ್ಚಗಳು(ದೂರವಾಣಿ, ಇಂಟರ್ನೆಟ್, ಕಂಪ್ಯೂಟರ್, ಶಾಮಿಯಾನ ಇತ್ಯಾದಿ) 1 ಕೋಟಿ ರೂ.

About Author

Leave a Reply

Your email address will not be published. Required fields are marked *