ಬಟ್ಟೆ ಅಂಗಡಿ ತೆರೆಯಲು ಅನುಮತಿಗಾಗಿ ಬೀದಿಗೆ ಬಂದ ವ್ಯಾಪಾರಿಗಳು

1 min read

ಮೈಸೂರು: ಬಟ್ಟೆ ಅಂಗಡಿ ತೆರೆಯಲು ಅವಕಾಶ ನೀಡುವಂತೆ ವ್ಯಾಪಾರಿಗಳು ಬೀದಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನ ಕೆ.ಟಿ ಸ್ಟ್ರೀಟ್ ಬಳಿ ಬಟ್ಟೆ ಓಪನ್‌ಗಾಗಿ ವ್ಯಾಪಾರಿಗಳ ಒತ್ತಾಯ ಮಾಡಿದ್ದಾರೆ.

ಇಂದಿನಿಂದ ಮೈಸೂರಿನಲ್ಲಿ ಅನ್ಲಾಕ್‌‌ ಆಗಿದೆ. ಬಟ್ಟೆ ಅಂಗಡಿ ತೆರೆಯಲು ಅವಕಾಶ ನೀಡದಿರುವುದಕ್ಕೆ ವ್ಯಾಪಾರಿಗಳು ರಸ್ತೆಗಿಳಿದು ಜಿಲ್ಲಾಡಳಿತದ ವಿರುದ್ದ ಬಟ್ಟೆ ವ್ಯಾಪಾರಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲರಂತೆ ನಮಗೂ ಅಂಗಡಿ ತೆರೆಯಲು ಅವಕಾಶ ಕೊಡಿ. ಕೊರೊನಾ ನಿಯಮ ಪಾಲಿಸಿ ವ್ಯಾಪಾರ ಮಾಡುತ್ತೇವೆ‌. ಈಗಾಗಲೇ ಎರಡು ತಿಂಗಳಿನಿಂದ ಲಾಕ್ಡೌನ್‌ನಿಂದ ಅಂಗಡಿಗಳು ಬಂದ್ ಆಗಿವೆ. ಇದರಿಂದ ಬಹಳ ನಷ್ಟವಾಗಿದೆ. ಕುಟುಂಬ ನಿರ್ವಹಣೆ, ಕಾರ್ಮಿಕರಿಗೆ ಸಂಬಳ, ಅಂಗಡಿ ಬಾಡಿಗೆಗೆ ಹಣವಿಲ್ಲದೆ ಪರದಾಡುತ್ತಿದ್ದೆವೆ ಎಂದರು.

https://www.facebook.com/NannuruMysuru/videos/323496755991191

ಈಗ ಮೈಸೂರಿನಲ್ಲಿ ಕೊರೊನಾ ಕಡಿಮೆಯಾಗುತ್ತಿದೆ. ಇದ್ರಿಂದ ಅನ್ಲಾಕ್‌ ಘೋಷಿಸಲಾಗಿದೆ. ಎಲ್ಲಾ ವ್ಯಾಪಾರಕ್ಕೂ ಅವಕಾಶ ನೀಡಲಾಗಿದೆ. ಆದರೆ ಬಟ್ಟೆ ಅಂಗಡಿ ತೆರೆಯಲು ಅವಕಾಶ ನೀಡಿಲ್ಲ. ಕೂಡಲೇ ಎಲ್ಲರಂತೆ ನಮಗೂ ವ್ಯಾಪಾರಕ್ಕೆ ಅವಕಾಶ ಕೊಡಿ. ಮೈಸೂರಿನಲ್ಲಿ ಬಟ್ಟೆ ವ್ಯಾಪಾರಿಗಳ ಒತ್ತಾಯ.

About Author

Leave a Reply

Your email address will not be published. Required fields are marked *