ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ 55 ವಾಹನ ಸೀಜ್- 584 ಮಂದಿ ಮೇಲೆ ಕೇಸ್!
1 min readಕೋವಿಡ್ ಮಾರ್ಗಸೂಚಿ ಹಿನ್ನಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಈ ನಿಯಮವನ್ನ ಉಲ್ಲಂಘಿಸಿದ ಬರೋಬ್ಬರಿ 55 ವಾಹನಗಳನ್ನ ಮೈಸೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನಗತ್ಯವಾಗಿ ರಸ್ತೆಗೆ ಇಳಿದು ಪೊಲೀಸರ ಜೊತೆಯೇ ಮಾತಿಗೆ ಇಳಿದ 52 ದ್ವಿಚಕ್ರ ವಾಹನ, ಎರಡು ಆಟೋ ಹಾಗೂ ಒಂದು ಕಾರು ಸೇರಿ ಬರೋಬ್ಬರಿ 55 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಇದೇವೇಳೆ ಸಾಮಾಜಿಕ ಅಂತರ ಮರೆತು ಓಡಾಟ, ಮಾಸ್ಕ್ ಧರಿಸದ ಜನರಿಂದಲು ದಂಡ ವಸೂಲಿ ಮಾಡಿದ್ದು, ಒಟ್ಟು 584 ಪ್ರಕರಣ ದಾಖಲಿಸಿ ಬರೋಬ್ಬರಿ ಒಂದು ಲಕ್ಷದ ಎರಡು ಸಾವಿರದ ನೂರು ರೂ ಸಂಗ್ರಹ ಮಾಡಲಾಗಿದೆ.
ಇದರ ಜೊತೆಯಲ್ಲಿ ಕೋವಿಡ್ ನಿಯಮ ಮೀರಿ ಅಂಗಡಿ ಮಳಿಗೆ ತೆರೆದು ವ್ಯಾಪಾರ ಮಾಡಿದ ವ್ಯಾಪಾರಸ್ಥರ ಮೇಲು ಪ್ರಕರಣ ದಾಖಲಾಗಿದ್ದು, ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ, ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ.