ಮೈಸೂರಿನಲ್ಲಿ ಮಾಡಿದ ಯೋಜನೆ ಸಕ್ಸಸ್ ಆದ್ರೆ ರಾಷ್ಟ್ರ ಮಟ್ಟದಲ್ಲಿ ಯೋಜನೆ ಜಾರಿ- ಟಾಸ್ಕ್!
1 min readಇಂದು ಶಾಸಕರಾದ ರಾಮದಾಸ್ ರವರ ನೇತೃತ್ವದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಶ್ರೀ ಜಯ ಚಾಮರಾಜ ಒಡೆಯರ್ ಸಭಾಂಗಣದಲ್ಲಿ ಕೃಷ್ಣರಾಜ ಕ್ಷೇತ್ರದ ಅಭಿವೃದ್ಧಿಯ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಲಾಯಿತು. ನಗರೋತ್ಥಾನ, ಕೌಶಲ್ಯಾಭಿವೃದ್ಧಿ ಯೋಜನೆ, ಸುರಕ್ಷಿತ ರಸ್ತೆ, ನಗರ ಜೀವನೋಪಾಯ ಯೋಜನೆ, ಬೋರ್ವೆಲ್ ಮುಕ್ತ ಕ್ಷೇತ್ರ ಮತ್ತು ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಿಕೆಗೆ ಸಂಬಂಧಿಸಿದಂತೆ ನಗರಪಾಲಿಕೆಯಲ್ಲಿ ಸಭೆ ನಡೆಸಲಾಯಿತು. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾನವ ಸಂಪನ್ಮೂಲ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಬಳಿಯಲ್ಲಿ ಕಳೆದ ತಿಂಗಳು ಸಭೆ ನಡೆಸಿದ್ದೆವು.
ನಾವು ಕೊಟ್ಟಂತಹ ವಿಷಯಗಳ ಬಗ್ಗೆ ಚಿಂತನ ಮಂಥನ ಆದ ನಂತರ ಅವರು ನಿಮ್ಮ ಕ್ಷೇತ್ರದಲ್ಲಿ ಮೊದಲ 6 ತಿಂಗಳಲ್ಲಿ ಅನುಷ್ಠಾನ ಮಾಡಿ ಅದಾದ ನಂತರ ಅದರ ಸಾಧಕ ಬಾಧಕಗಳನ್ನು ನೋಡಿಕೊಂಡು ಒಂದು ಪಾಲಿಸಿ ಮಾಡಿ ರಾಷ್ಟ್ರಮಟ್ಟಕ್ಕೆ ನಾವು ಇದನ್ನು ಮಾಡುತ್ತೇವೆ ಎಂದರು. ನರೇಗಾ ವನ್ನು ಗ್ರಾಮೀಣ ಪ್ರದೇಶಕ್ಕೆ ಹೇಗೆ ಇದೆಯೋ ಅದೇ ರೀತಿಯಲ್ಲೇ ನಗರ ಪ್ರದೇಶಕ್ಕೂ ಕೂಡಾ ನರೇಗಾ ವನ್ನ ತಂದರೆ ಖಾಯಂ ಉದ್ಯೋಗ ಆಗುತ್ತದೆ ಎಂದು ಕೇಂದ್ರದ ಕಾರ್ಮಿಕ ಸಚಿವರಾದ ಭೂಪೇಂದ್ರ ಯಾದವ್ ಅವರಿಗೆ ತಿಳಿಸಿದ್ದೆವು. ಅವರೊಟ್ಟಿಗೆ ದೆಹಲಿಯಲ್ಲಿ ಕೂತು ನಿರಂತರ ಸಭೆ ನಡೆಸಿದ ನಂತರದಲ್ಲಿ ಅವರು ನನಗೆ ನರೇಗಾ ವಿಷಯವನ್ನು ಪರಿಗಣಿಸುವುದಾಗಿ ಪತ್ರ ಬರೆದರು. ನಾವು ಇದನ್ನು ಮೈಸೂರು ನಗರ ಪಾಲಿಕೆಯಲ್ಲಿ ಮಾಡಿ ಒಂದು ಪ್ರಸ್ತಾಪವನ್ನ ಕೇಂದ್ರಕ್ಕೆ ತಿಳಿಸೋಣ, ಎರಡನೆಯದಾಗಿ ಉದ್ಯೋಗ ಹಾಗೂ ಕೌಶಲ್ಯಕ್ಕೆ ಸಂಬಂಧಪಟ್ಟಂತೆ ಇವೆರಡನ್ನೂ ಕೂಡಾ ಒಟ್ಟಿಗೆ ಸೇರಿಸುವ ಕೆಲಸ ಮಾಡಬೇಕು.
- ಉದ್ಯೋಗ ಕ್ಷೇತ್ರ, ಲೇಬರ್ ಡಿಪಾರ್ಟ್ಮೆಂಟ್,ಕೌಶಲ್ಯಾಭಿವೃದ್ಧಿ ಇಲಾಖೆ, ತೋಟಗಾರಿಕಾ ಇಲಾಖೆ, ಶಿಕ್ಷಣ ಇಲಾಖೆ ,ಕೃಷಿ ಇಲಾಖೆ, ಇವೆಲ್ಲವನ್ನೂ ಸೇರಿಸಿ ಒಂದು ಸೂರಿನಡಿಯಲ್ಲಿ ಸ್ಟ್ರಾಂಗ್ ಇಂಡಿಯಾ ಕಲ್ಪನೆಯೊಂದಿಗೆ ಜನವರಿ 4,5,6,7,8 ಐದು ದಿನಗಳ ಕಾಲ ಒಂದೊಂದು ದಿನ 4 ವಾರ್ಡ್ ಗಳನ್ನು ಸೇರಿಸಿಕೊಂಡು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ಒಂದು ಪ್ರದರ್ಶನವನ್ನು ಏರ್ಪಡಿಸುವವರಿದ್ದೇವೆ, ಜೊತೆಗೆ 8ನೇ ತರಗತಿಯಿಂದ ಮೇಲ್ಪಟ್ಟವರು ಅಲ್ಲಿಗೆ ಭೇಟಿ ನೀಡಿ ಅಲ್ಲಿ ಪ್ರದರ್ಶನವನ್ನು ನೋಡಿ ತಮಗೆ ಯಾವ ಯಾವ ಸ್ಕಿಲ್ ಬೇಕೋ ಅದನ್ನು ಆಯ್ಕೆ ಮಾಡಿ ರಿಜಿಸ್ಟ್ರೇಷನ್ ಅನ್ನು ಮಾಡಿಕೊಳ್ಳುವ ಕೆಲಸ ಮಾಡಲಾಗುತ್ತದೆ.
- ರಾಜ್ಯದಲ್ಲಿ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಮಾಡೆಲ್ ಅನ್ನು ಮಾಡಬೇಕು.
ಜನವರಿ 4 ರಂದು ಶಂಕರ ಮಠದಲ್ಲಿ ಚಾಲನೆ ದೊರೆಯಲಿದೆ, ಕೌಶಲ್ಯಾಭಿವೃದ್ಧಿ ಸಚಿವರು, ಕಾರ್ಮಿಕ ಸಚಿವರು ಮತ್ತು 8 ನೆ ತಾರೀಖಿನಂದು ಕೈಗಾರಿಕಾ ಮಂತ್ರಿಗಳು ಜೊತೆಗೆ ಕೇಂದ್ರದ ಮಂತ್ರಿಗಳೂ ಕೂಡಾ ಆಗಮಿಸಲಿದ್ದಾರೆ. ನಗರಪಾಲಿಕೆ ಯಾವ ರೀತಿ ಭಾಗವಹಿಸಬೇಕೆಂದು ಚರ್ಚೆ ಮಾಡಬೇಕಾಗಿದೆ. ಈ ಸಭೆಯಲ್ಲಿ ಪೂಜ ಮಹಾಪೌರರಾದ ಸುನಂದ ಪಾಲನೇತ್ರರವರು, ಭಾರತ ಜನತಾ ಪಾರ್ಟಿ ಆಡಳಿತಪಕ್ಷ ನಾಯಕರಾದ ಶಿವಕುಮಾರ್ ರವರು,ನಗರ ಪಾಲಿಕೆ ಸದಸ್ಯರಾದ ಮಂಜುನಾಥ್ ರವರು, ಹಾಗೂ ನಗರಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತರೆಡ್ಡಿ ರವರು, ಉಪ ಆಯುಕ್ತರಾದ ರೂಪ ರವರು, ಅಧೀಕ್ಷಕ ಅಭಿಯಂತರರು ಮಹೇಶ್ ರವರು, ಅಭಿವೃದ್ಧಿ ಒಳಚರಂಡಿ ಕುಡಿಯುವ ನೀರು ಕಾರ್ಯಪಾಲಕ ಅಭಿಯಂತರರಾದ ಮಧುಸೂದನ್, ರಂಜಿತ್ ,ಸುವರ್ಣ,ಸಿಂದು ಮತ್ತು ವಲಯ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಮತ್ತು ಒಳಚರಂಡಿ ಸಹಾಯಕ ಕಾರ್ಯಪಾಲಕ ಅಭಿಯಂತರರು ನರ್ಮ್ ವಿಭಾಗದ ಅಧಿಕಾರಿಗಳು ಇನ್ನು ಮುಂತಾದವರು ಹಾಜರಿದ್ದರು