ಮೈಸೂರು ನಗರ ಪೊಲೀಸರ ವಿನೂತನ ಯೋಜನೆ ಶೀಘ್ರದಲ್ಲೇ ಜಾರಿ- ಸಾಧಕ ? ಭಾದಕವೇನು!?

1 min read

ಮೈಸೂರಲ್ಲಿ ನಗರ ಪೊಲೀಸರ ನ್ಯೂ ಐಡಿಯಾ?

ಕೋವಿಡ್ ಮಾರ್ಗಸೂಚಿಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಲು ಮೈಸೂರು ಪೊಲೀಸರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು ಇದು ಸಹಕಾರಿ ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಹೌದು, ಮೈಸೂರು ಪೊಲೀಸರು ಸಾರ್ವಜನಿಕರ ಸಹ ಭಾಗಿತ್ವದೊಂದಿಗೆ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಮುಂದೆ ಬರುವವರಿಗೆ ಗುರುತಿನ ಚೀಟಿ ವಿತರಣೆ

ಮೈಸೂರಿನಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಮುಂದಾಗುವವರಿಗೆ ಪೊಲೀಸ ಇಲಾಖೆಯಿಂದ ಗುರುತಿನ ಚೀಟಿ‌ ( ಐಡಿ ಕಾರ್ಡ್ ) ನೀಡಲಾಗ್ತಿದೆ. ಅಂದರೆ ‘MyCop’ ಹೆಸರಿನ (Mysuru covid policing Volunteer card) ಸಿಗಲಿದೆ. ಅಂದರೆ “ಕೋವಿಡ್ ಮಾರ್ಗಸೂಚಿ ಅನುಷ್ಠಾನ ಪ್ರತಿನಿಧಿ” ಎಂದು ಈ ಹೆಸರಿನಲ್ಲಿ ಗುರುತಿನ ಚೀಟಿ ವಿತರಣೆಯಾಗಲಿದೆಯಂತೆ.

200 ಮಂದಿ ಒಂದು ಠಾಣಾ ವ್ಯಾಪ್ತಿಗೆ

ಇನ್ನು ಅತ್ಯಂತ ಕಟ್ಟು ನಿಟ್ಟಾಗಿ ಈ ಯೋಜನೆ ಜಾರಿಗೆ ತರಲು ಮೈಸೂರು ಪೊಲೀಸರು ಮುಂದಾಗಿದ್ದಾರೆ. ಕಾರಣ ಇಡೀ ರಾಜ್ಯದಲ್ಲೇ ಮೊದಲ ಪ್ರಯತ್ನ ಮೈಸೂರಿನಲ್ಲಿ ಆಗುತ್ತಿದ್ದು, ಇದೊಂದು ಅತ್ಯಂತ ಅನುಕೂಲಕರ ಯೋಜನೆ ಅನ್ನೋದು ಪೊಲೀಸ್ ಇಲಾಖೆಯ ಮಾತು. ಅದಕ್ಕಾಗಿ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ 200 ಮಂದಿಯನ್ನು ನಿಯೋಜನೆ ಮಾಡಿಕೊಳ್ಳಲು ಚಿಂತನೆ ಆಗುತ್ತಿದೆ. ಅದರಲ್ಲು ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಈ ರೀತಿಯ ಪ್ರಯತ್ನ ಮುಂದುವರಿಯಲಿದ್ದು, ನಂತರದ ದಿನಗಳಲ್ಲಿ ಬೇರೆ ಉದ್ದೇಶಗಳಿಗೂ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಹೇಳಿಕೆ ನೀಡಿದ್ದಾರೆ.

ಇದು ನಿಜಕ್ಕು ಸದ್ಭಳಕ್ಕೆ ಆಗುತ್ತಾ?


ಹೌದು- ಮೈಸೂರು ಪೊಲೀಸರೆನ್ನೋ ಜನಸ್ನೇಹಿಯಾಗಿ ಈ ಯೋಜನೆ ಜಾರಿಗೆ ತರುತ್ತಿದ್ದಾರೆ. ಆದರೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಇದಕ್ಕೆ ವಿರೋಧವು ಕೇಳಿ ಬರುತ್ತಿದೆ. ಕಾರಣ ಇದೇ ವಾಲೆಂಟಿಯರ್ ಏಕಾಏಕಿ ಆ ಕಾರ್ಡ್‌ನ್ನ ದುರ್ಬಳಕೆ ಮಾಡಿಕೊಂಡರೆ ಅಂತವರಿಗೆ ಯಾವ ಕ್ರಮ ಎಂದು ಸಹ ಉಲ್ಲೇಖ ಮಾಡಬೇಕು ಎಂದು ಸಾರ್ವಜನಿಕರು ಮಾತಾಡುತ್ತಿದ್ದಾರೆ. ಕಾರಣ ಒಂದು ಯೋಜನೆ ತಂದಾಗ ಅದರ ಸಾಧಕ ಬಾಧಕವನ್ನು ಲೆಕ್ಕಾಚಾರ ಹಾಕಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನ ಇಟ್ಟುಕೊಂಡು ಈ ಕ್ರಮ ಕೈಗೊಳ್ಳಬೇಕು ಎಂಬುದು ಮೈಸೂರು ನಗರ ಪೊಲೀಸರಿಗೆ ಸಾರ್ವಜನಿಕರು ಸಲಹೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *