ಮೈಸೂರಿನಲ್ಲಿ ಇನ್ಮುಂದೆ ಪೊಲೀಸ್ ಬೀಟ್ ಜಾಸ್ತಿಯಾಗುತ್ತೆ- ಸಾರ್ವಜನಿಕರು ಸಹಕಾರ ಕೊಡ್ಬೇಕು- ಡಾ.ಚಂದ್ರಗುಪ್ತ!
1 min readಮೈಸೂರು : ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಹಲ್ಲೆ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಆಯುಕ್ತರು ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಮಧ್ಯಾಹ್ನ ನರಸಿಂಹರಾಜ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಊಟದ ನೆಪದಲ್ಲಿ ಬಂದು ಅತ್ಯಾಚಾರ ಆಗಿದೆ ಅಂತ ದೂರು ದಾಖಲಾಗಿದೆ. ಆದರೆ ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಪರಿಚಯಸ್ಥರು ಅಂತ ಗೊತ್ತಾಗಿದೆ. ಆದರೆ ಯುವತಿ ಮಾತ್ರ ಯಾಕೆ ಆ ಯುವಕನ ಪರಿಚಯ ಇಲ್ಲ ಅಂತ ಹೇಳಿದ್ದಾಳೆ. ಹಾಗಾಗಿ ಅದರ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.
ಸದ್ಯ ಆಕೆಗೆ ಮೆಡಿಕಲ್ ಟ್ರೀಟ್‌ಮೆಂಟ್ ನಡಿಯುತ್ತಿದ್ದು, 164 ಸ್ಟೇಟ್ಮೆಂಟ್ ನಂತರ ಏನಾಗುತ್ತೆ ನೋಡಬೇಕು. ಸದ್ಯ ದೂರಿನ ಆಧಾರದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸದ್ಯ ಯುವಕನನ್ನ ಬಂಧಿಸಲಾಗಿದೆ ಅಂತ ಮೈಸೂರಿನಲ್ಲಿ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಹೇಳಿಕೆ ನೀಡಿದ್ದಾರೆ.
ಇನ್ನು ಮೈಸೂರಿನ ನಿರ್ಜನ ಪ್ರದೇಶದಲ್ಲಿ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಮಾಹಿತಿ ನೀಡಿದ ಅವರು ಮೈಸೂರಿನಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಮೈಸೂರಿನ ಎಲ್ಲಾ ನಿರ್ಜನ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಿದ್ದು, ಜನರಿಗೆ ತಿಳುವಳಿಕೆ ಮೂಡಿಸುತ್ತಿದ್ದೆವೆ. ಯಾವುದೋ ಒಂದು ಕಡೆ ಪ್ರಕರಣ ಆದಾಗ ಆ ಪ್ರದೇಶಕ್ಕೆ ಮಾತ್ರ ಗಸ್ತು ಸಿಮೀತವಾಗುವುದಿಲ್ಲ. ಎಲ್ಲಾ ಕಡೆಗೂ ಗಸ್ತು ಹೆಚ್ಚಳಕ್ಕೆ ಸೂಚಿಸಿದ್ದೆವೆ. ಕೇವಲ ಪೊಲೀಸರ ಜವಬ್ದಾರಿ ಎಂದು ಸಾರ್ವಜನಿಕರು ಮೈ ಮರೆಯಬಾರದು. ಅಪರಾಧ ನಡೆಯದಂತೆ ತಡೆಯಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಯಾವುದೇ ವಿಚಾರದಲ್ಲೂ ಸಹ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿಕೆ ನೀಡಿದ್ದಾರೆ.