September 9, 2024

ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಅಂಬಾರಿಯ ಸವಾರಿ ಇಂದಿನಿಂದ ಶುರು!

1 min read

ಮೈಸೂರು : ಕಳೆದ ಮೂರ್ನಾಲ್ಕು ತಿಂಗಳಿಂದ ಸ್ಥಗಿತವಾಗಿದ್ದ ಅಂಬಾರಿ ಸವಾರಿ ಇಂದಿನಿಂದ ಶುರುವಾಗಿದೆ. ಇಂದಿನಿಂದ ಮೈಸೂರಿನಲ್ಲಿ ಡಬ್ಬಲ್ ಡೆಕ್ಕರ್ ಬಸ್ ಅಂಬಾರಿ ಬಸ್ ಸಂಚಾರ ಆರಂಭಿಸಿದೆ. ಉದ್ಘಾಟನೆ ಬಳಿಕ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಈ ಸೇವೆ ಇದೀಗಾ ಮೈಸೂರು ನಗರದ ಪ್ರವಾಸಿ ತಾಣಗಳ ಸುತ್ತಾಟ ನಡೆಸಲಿದೆ.

ಇಂದಿನಿಂದ ಸಂಚಾರ ಆರಂಭಿಸಿದ ಅಂಬಾರಿ ಬಸ್

ಪ್ರವಾಸೋದ್ಯಮ ಇಲಾಖೆಯಿಂದ ಅಂಬಾರಿ ವಾಹನ ಸಂಚಾರವಾಗುತ್ತಿದ್ದು, ನಗರದ ಪ್ರವಾಸಿ ತಾಣಗಳಿಗೆ ತೆರಳಲಿ ಪ್ರತಿ ಸ್ಥಳಕ್ಕೆ ಭೇಟಿಕೊಟ್ಟಾಗ ಸ್ಪೀಕರ್ ಗಳಲ್ಲಿ ಸ್ಥಳದ ವಿವರಣೆ ನೀಡುವುದು ಇದರ ವಿಶೇಷವಾಗಿದೆ. ಸದ್ಯ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಸಂಚಾರ ಆರಂಭವಾಗಿದ್ದು ದಸರಾ ವೇಳೆ ರಾತ್ರಿ ದೀಪಾಲಂಕಾರದಲ್ಲಿ ಸಂಚಾರ ಮಾಡಲು ಸಹ ಸಿದ್ದತೆ ನಡೆಯಿತ್ತಿದೆ.

About Author

Leave a Reply

Your email address will not be published. Required fields are marked *