ಹಸಿರು ಮೈಸೂರು ಮಾಡಲು ಮೂಡಾ ಪಣ: ಭವಿಷ್ಯದ ಆಮ್ಲಜನಕಕ್ಕಾಗಿ ಗಿಡ ನೆಡುವ ಕಾರ್ಯ
1 min readಮೈಸೂರು: ಹಸಿರು ಮೈಸೂರು ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಪಣತೊಟ್ಟಿದ್ದು ಭವಿಷ್ಯದ ಆಮ್ಲಜನಕಕ್ಕಾಗಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದೆ.
ಮೂಡಾ, ಅರಣ್ಯ ಇಲಾಖೆ, ಪಾಲಿಕೆ ವತಿಯಿಂದ ಜೀವಾನಿಲ ಉತ್ಪಾದನ ಕಾರ್ಯ ನಡೆಯಲಿದೆ. ವಿವಿಧ ಜಾತಿಯ 25 ಸಾವಿರ ಗಿಡ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ವಿಶ್ವಪರಿಸರ ದಿನಾಚರಣೆದಿನದಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಅಂತ ಇಂದು ಸುದ್ದಿಗೋಷ್ಠಿ ನಡೆಸಿ ಮೂಡಾ ಅಧ್ಯಕ್ಷ ರಾಜೀವ್ ಹೇಳಿಕೆ ನೀಡಿದ್ದಾರೆ.
ಹಸಿರು ಮೈಸೂರು ಮಾಡಲು ಹಸಿರು ಮೈಸೂರು ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ 50 ಸಾವಿರ ಸಸ್ಯಗಳನ್ನು ಬೆಳೆಸಿದೆ. ಈ ಬಾರಿ 20 ಸಾವಿರ ಗಿಡಗಳನ್ನು ಬೆಳೆಸಲಾಗಿದೆ. ಈ ಗಿಡಗಳನ್ನು ಜೂನ್ 5 ರಂದು ವಿಶ್ವಪರಿಸರ ದಿನದಂದು ಹಸ್ತಾಂತರ ಮಾಡಲಾಗುತ್ತೆ. ಹಸಿರು ಮೈಸೂರು ಮಾಡಲು ಸಾರ್ವಜನಿಕ ಸಂಘ ಸಂಸ್ಥೆಗಳ ಸಹಭಾಗಿತ್ವ ಬೇಕು.
ಹಲವು ಸಂಘ ಸಂಸ್ಥೆಗಳು ಮೇಲುಸ್ತವರಿ ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಗಿಡಗಳನ್ನು ಪೋಷಿಸಲು ಆಸಕ್ತರು ಮೂಡಾ, ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿ. ಸುತ್ತೂರು ಶ್ರೀಗಳು, ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಒಟ್ಟಾರೆ ಮೈಸೂರು ನಗರವನ್ನು ಹಸಿರು ಮೈಸೂರು ಮಾಡಲು ಹೆಜ್ಜೆ ಇಡಲಾಗಿದೆ. ದೀರ್ಘಕಾಲ ಉಳಿಯುವ ಮತ್ತು ಹೆಚ್ಚು ಆಮ್ಲಜನಕ ನೀಡುವ ಅತ್ತಿ, ಮತ್ತಿ, ಬಾಗೆ, ಹಲಸು, ನೇರಳೆ, ಮಹಾಗನಿ, ಬೇವು, ಸಂಪಿಗೆ, ನಾಗಲಿಂಗ ಪುಷ್ಪ ಗಿಡ ನೆಟ್ಟು ಮರಗಳಾಗಿ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ ಅಂತ ಮೂಡಾ ಅಧ್ಯಕ್ಷ ರಾಜೀವ್ ಹೇಳಿದ್ದಾರೆ.