ಮೈಸೂರು ವಿವಿಯಲ್ಲಿ ಗೋಲ್ಡ್‌ ಮೆಡಲಿಸ್ಟ್‌ ಪಡೆದ ಮಹಿಳೆ ಅನುಮಾನಾಸ್ಪದ ಸಾವು

1 min read

ಮೈಸೂರು,ಅ.9-ಮೈಸೂರು ವಿಶ್ವವಿದ್ಯಾಲಯದಲ್ಲಿ ಗೋಲ್ಡ್ ಮೆಡಲಿಸ್ಟ್‌ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆಶಾ ಸಾವನ್ನಪ್ಪಿರುವ ಮಹಿಳೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಡೇನಹಳ್ಳಿಯ ಆಶಾ ಅವರು ಮಳವಳ್ಳಿಯ ನಾಗಾಪ್ರಸಾದ್ ಎಂಬವರನ್ನು ಪ್ರೀತಿಸಿ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಬ್ಬರು ಮೈಸೂರಿನಲ್ಲಿ ವಾಸವಾಗಿದ್ದರು. ನಾಗಾಪ್ರಸಾದ್‌, ಆಶಾ ಬಳಿ ಯಾವಾಗಲೂ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಈ ಕುರಿತು ಎರಡು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಡೈವೋರ್ಸ್ ಹಂತಕ್ಕೆ ತಲುಪಿತ್ತು. ನಂತರ ಫ್ಯಾಮಿಲ್ ಕೋರ್ಟ್ನಲ್ಲಿ ರಾಜೀ ಮಾಡಲಾಗಿತ್ತು. ಇದಾದ ಮೇಲೂ ನಾಗಾಪ್ರಸಾದ್ ನಿರಂತರವಾಗಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಆಶಾ ನಿನ್ನೆಯಷ್ಟೆ ಗಂಡನ ಮನೆ ಬಿಟ್ಟು ಪಿಜಿಯಲ್ಲಿ ಇರುತ್ತೇನೆ ಎಂದು ಹೇಳಿದ್ದರು. ಆದರೆ ನಿನ್ನೆ ಸಂಜೆ ನಾಗಾಪ್ರಸಾದ್ ಕರೆಮಾಡಿ ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆಶಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *