ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ 24×7 ಸಹಾಯವಾಣಿ ಆರಂಭ

1 min read

ಮೈಸೂರು: ಮೈಸೂರಿನಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಸಾರ್ವಜನಿಕರಿಗೆ ಮಾಹಿತಿ ಹಾಗೂ ನೆರವು ನೀಡುವ ಸಲುವಾಗಿ 24×7 ರಂತೆ ಕೆಲಸ ನಿರ್ವಹಿಸುವ ಕೋವಿಡ್-19 ಸಹಾಯವಾಣಿ ಆರಂಭವಾಗಿದೆ.

ನಗರದ ಯಾದವಗಿರಿಯಲ್ಲಿರುವ ವಾಣಿವಿಲಾಸ ವಾಟರ್ ವಕ್ರ್ಸ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ 24/7 ಸಹಾಯವಾಣಿಯನ್ನು ತೆರೆಯಲಾಗಿದೆ. ಸಾರ್ವಜನಿಕರು ದೂರವಾಣಿ ಮೂಲಕ ಮಾಹಿತಿ ಹಾಗೂ ನೆರವು ಪಡೆಯಬಹುದಾಗಿದೆ.

ಸಾರ್ವಜನಿಕರು ಈ ಕೆಳಕಂಡ ದೂರವಾಣಿಗೆ ಕರೆ ಮಾಡಿ ಕೋವಿಡ್-19 ಸಂಬಂಧ ಸಹಾಯವನ್ನು ಪಡೆದುಕೊಳ್ಳಬೇಕೆಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಸಹಾಯವಾಣಿ ನಂ ಇಲ್ಲಿದೆ ನೋಡಿ:

  1. ಕೃಷ್ಣರಾಜ ಕ್ಷೇತ್ರದ ಸಾರ್ವಜನಿಕರು ದೂರವಾಣಿ 0821-2517922 & 0821-2519222
  2. ಚಾಮರಾಜ ಕ್ಷೇತ್ರದವರು & ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು( ವಾರ್ಡ್ ನಂ 44, 45, 46, 58 ) 0821-2519922 & 0821-2519522
  3. ನರಸಿಂಹರಾಜ ಕ್ಷೇತ್ರದವರು ಸಹಾಯವಾಣಿ 0821-2517422 & 0821-2515522 ನಂಬರ್ ಸಂಪರ್ಕಿಸುವುದು.

About Author

Leave a Reply

Your email address will not be published. Required fields are marked *