ಹೆಲಿಟೂರಿಸಂ: ಕೊರೊನಾ ಕಾರಣ ಸಾರ್ವಜನಿಕ ಅಹವಾಲು ಸಭೆ ಮುಂದೂಡಿಕೆ

1 min read

ಮೈಸೂರು: ಹೆಲಿಟೂರಿಸಂಗೆ ಲಲಿತ್ ಮಹಲ್ ಬಳಿ ಇರುವ ಮರಗಳನ್ನು ಕಡಿಯಲು ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕರೆಯಲಾಗಿದ್ದ ಸಾರ್ವಜನಿಕ ಅಹವಾಲು ಸಭೆ ಮುಂದೂಡಿಕೆ ಮಾಡಲಾಗಿದೆ.

ಏ.23ರಂದು ಅರಣ್ಯ ಭವವದಲ್ಲಿ ಅರಣ್ಯ ಇಲಾಖೆ 11 ಗಂಟೆಗೆ ಸಾರ್ವಜನಿಕ ಅಹವಾಲು ಸಭೆಯನ್ನು ಕರೆದಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಅನಿರ್ದಿಷ್ಟಾವಧಿಯವರೆಗೂ ಮುಂದೂಡಲಾಗಿದೆ.

ಹೆಲಿಟೂರಿಸಂ ಮರಕಡಿಯಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇಂದು ಸಾರ್ವಜನಿಕ ಅಹವಾಲು ಸ್ವೀಕರಿಸಿದರೆ ಹೆಚ್ಚು ಜನರು ಸೇರುವ ಸಾಧ್ಯತೆ ಇತ್ತು. ಹೆಚ್ಚು ಜನರು ಸೇರುತ್ತಾರೆ ಎಂಬ ಕಾರಣಕ್ಕೆ ಸಭೆ ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ಮೈಸೂರಿನ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿಯಿಂದ ಪ್ರಕಟಣೆ ಹೊರಡಿಸಿದ್ದಾರೆ.

About Author

Leave a Reply

Your email address will not be published. Required fields are marked *