MUDA ಆಯುಕ್ತ ಬಿ.ನಟೇಶ್ ಬೆಂಗಳೂರಿಗೆ ಎತ್ತಂಗಡಿ! ಇದು ಭೂ ಹಗರಣ ಆರೋಪದ ಎಫೆಕ್ಟ್!?
1 min read
ಮೈಸೂರಿನಲ್ಲಿ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದ್ದು ಇದೀಗಾ (ಮುಡಾ) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ ನಟೇಶ್ ಎತ್ತಂಗಡಿಯಾಗಿದ್ದಾರೆ. ಅಧಿಕಾರಿಗಳ ಜಟಾಪಟಿ ಹಾಗೂ ಭೂ ಹಗರಣ ಆರೋಪದಲ್ಲಿ ಮುಡಾ ಹೆಸರು ಕೇಳಿ ಬಂದಿತ್ತು. ಆದರೆ ನಟೇಶ್ ಅತ್ಯುತ್ತಮ ಕೆಲಸ ಮಾಡುತ್ತ ಎಲೆಮರಿ ಕಾಯಿಯಂತೆ ಕಾರ್ಯ ನಿರ್ವಹಿಸಿದರು.

ಆದರೆ ಇದೀಗಾ ಏಕಾಏಕಿ ರಾಜ್ಯ ಸರ್ಕಾರ ನಟೇಶ್ ಅವರನ್ನ ಬೆಂಗಳೂರಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತರ ಕಚೇರಿ (ಆಡಳಿತ) ಜಂಟಿ ನಿರ್ದೇಶಕರು ಇಲ್ಲಿಗೆ ವರ್ಗಾಹಿಸಲಾಗಿದೆ. ಆದರೆ ಇದು ಮೈಸೂರಿನ ಭೂ ಮಾಫಿಯಾದ ಎಫೆಕ್ಟ್ ಎಂದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಹೆಸರು ಕೇಳಿ ಬರುತ್ತಿದೆ.
