ಸಿದ್ದರಾಮಯ್ಯ ಭಾವಿ ಸಿಎಂ ಎಂಬ ಜಮೀರ್ ಹೇಳಿಕೆಗೆ ಧ್ರುವನಾರಾಯಣ್ ಲೇವಡಿ!
1 min readಶಾಸಕ ಜಮೀರ್ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ R ಧ್ರುವನಾರಾಯಣ್ ಲೇವಡಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಜಮೀರ್ ಈ ಹಿಂದೆ ಜೆಡಿಎಸ್ ನಲ್ಲಿ ಇದ್ದಾಗ ಕುಮಾರಣ್ಣ ಅಂತಿದ್ರು. ಇದೀಗ ಕಾಂಗ್ರೆಸ್ ನಲ್ಲಿದ್ದು ಸಿದ್ರಾಮಣ್ಣ ಅಂತಿದ್ದಾರೆ. ಜಮೀರ್ ಈ ರೀತಿ ಹೇಳುವುದು ರೂಢಿಯಾಗಿದೆ ಎಂದು ಜಮೀರ್‌ಗೆ ಟಾಂಗ್ ನೀಡಿದ್ರು.
ಇತ್ತ ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ ಎಂಬ ಜಮೀರ್ ಹೇಳಿಕೆಗೆ ಅಸಮಾಧಾನ ಹೊರಹಾಕಿದ ಧ್ರುವನಾರಾಯಣ್ ಸಿದ್ದರಾಮಯ್ಯ ಸಿಎಂ ಎಂದು ಇದು ಹೇಳುವ ಸಮಯವಲ್ಲ. ಈ ರೀತಿಯ ಹೇಳಿಕೆಯಿಂದ ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡುತ್ತದೆ. ಈ ರೀತಿಯ ಹೇಳಿಕೆಯನ್ನು ನೀಡದಂತೆ ಜಮೀರ್‌ಗೆ ಧ್ರುವನಾರಾಯಣ್ ಸೂಚನೆ ನೀಡಿದ್ದಾರೆ.
ಜಮೀರ್ ಅಹ್ಮದ್‌ಗೆ ನೋಟಿಸ್ ನೀಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಇದೇವೇಳೆ ತಿಳಿಸಿದ್ದಾರೆ.