ಮ್ಯಾಂಗೋ ಮೇಳ ಶುರು- ವೆರೈಟಿ ವೆರೈಟಿ ಮಾವು ತಿನ್ನಲು ರೆಡಿಯಾಗಿ!

1 min read

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಮಾವುಮೇಳ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜನೆ. ಮಾವು ಪ್ರದರ್ಶನ ಮತ್ತು ಮಾರಾಟ ಮೇಳ-2022ಕ್ಕೆ
ಜಿಲ್ಲಾಧಿಕಾರಿ ಬಗಾದಿ ಗೌತಮ್ ರಿಂದ ಚಾಲನೆ.

16ವಿವಿಧ ತಳಿಯ ಮಾವುಗಳ ಪ್ರದರ್ಶನ. 26 ಮಳಿಗೆಗಳಲ್ಲಿ ಮಾವು ಮಾರಾಟ ಮತ್ತು ಪ್ರದರ್ಶನ. ಬಾದಾಮಿ, ರಸಪುರಿ, ಮಲ್ಲಿಕಾ, ಆಮ್ರಪಾಲಿ, ಹಿಮಾಮ್ ಪಸಂದ್, ಸೇಂದುರ, ದಶೇರಿ, ಮಲಗೋವಾ, ತೋತಾಪುರಿ ಸೇರಿ ಹಲವು ತಳಿಗಳ ಪ್ರದರ್ಶನ. ರೈತರಿಂದ ನೇರವಾಗಿ ಮಾರಾಟ. ಮಾವು ಬೆಳೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ.
ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ. ಮೈಸೂರಿನ ಕುಪ್ಪಣ್ಣ ಪಾರ್ಕ್ ನಲ್ಲಿ ನಡೆಯುತ್ತಿರುವ ಮಾವು ಮೇಳ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದ್ದ ಕಾರ್ಯಕ್ರಮ.

About Author

Leave a Reply

Your email address will not be published. Required fields are marked *