ಕೆ.ಆರ್ ನಗರದಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ಅಣುಕು ಪ್ರದರ್ಶನ ನಡೆಯಿತು
1 min readಮೈಸೂರು: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಾರ್ಖಾನೆಗಳು, ಬಾಯ್ರ್ ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಸಹಯೋಗದೊಂದಿಗೆ ವಿಪತ್ತು ನಿರ್ವಹಣೆ ಬಗ್ಗೆ ಅಣುಕು ಪ್ರದರ್ಶನವು ಇಂದು ಕೆ. ಆರ್. ನಗರ ತಾಲ್ಲೂಕಿನ ಕುಂಬಾರಕೊಪ್ಪಲು ರಸ್ತೆಯಲ್ಲಿ ನಡೆಯಿತು.
ಮೈಸೂರು ಅಪರ ಜಿಲ್ಲಾಧಿಕಾರಿ ಡಾ ಬಿ.ಎಸ್. ಮಂಜುನಾಧ್ ಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಅಣುಕು ಪ್ರದರ್ಶನ ನಡೆಯಿತು.
ಅಣಕು ಪ್ರದರ್ಶನದಲ್ಲಿ ರಾಸಾಯಿನಿಕ ಸೋರಿಕೆ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕ್ರಮಗಳು, ಕೈಗೊಳ್ಳಬೇಕಾದ ಮುಂಜಾಗೃತೆಗಳ ಸಿದ್ದತೆಗಳ ಬಗ್ಗೆ ಕಾರ್ಯಾಚರಣೆಯಲ್ಲಿ ಬೆಳಕು ಚೆಲ್ಲಲಾಯಿತು.
ದುರಂತದಿಂದ ಮನುಷ್ಯನಿಗೆ ಸಂಭವಿಸುವ ಸಂಭವಿಸುವ ಸಾವು ನೋವು ಮತ್ತು ನಷ್ಟಗಳನ್ನು ಕನಿಷ್ಟಗೊಳಿಸುವ ಹಾಗೂ ಪರಿಣಾಮಕಾರಿಯಾಗಿ ತುರ್ತು ನಿಭಾಯಿಸುವ ಕುರಿತು ಕೆಲಸಗಾರರನ್ನು ಸಿದ್ಧಗೊಳಿಸುವುದು.
ಆಡಳಿತ ವರ್ಗದವರಿಗೆ ವಿಪತ್ತುಗಳ ನಿವಾರಣೆಯಲ್ಲಿ ಪಾತ್ರಗಳು ಪಾತ್ರಗಳು, ಕೆಲಸಗಾರರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಪ್ರದರ್ಶನದ ಉದ್ದೇಶವಾಗಿರುತ್ತದೆ.
ರಾಸಾಯಿನಿಕ ಸೋರಿಕೆಯಿಂದ ಸಂಭವಿಸಿದ ದುರಂತದ ಕುರಿತು ಅಣಕು ಪ್ರದರ್ಶನದಲ್ಲಿ ಗಂಬೀರವಾಗಿ ಗಾಯಗೊಂಡ 8 ಮಂದಿಗೆ ರಕ್ಷಣೆ ಒದಗಿಸಿ ಆಂಬುಲೆನ್ಸ್ ಗಳ ಮೂಲಕ ಕರೆದೊಯ್ಯಲಾಯಿತು. ಹೆಚ್ ಪಿ ಸಿ ಎಲ್ ಹಾಗೂ ಕರ್ನಾಟಕ ಅಗ್ನಿ ಶಾಮಕ ದಳದ ವಾಹನಗಳು ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಸುಮಾರು ಅರ್ಧ ಗಂಟೆಯ ಅಣಕು ಪ್ರದರ್ಶನದಲ್ಲಿ 8 ಆಂಬುಲೆನ್ಸ್ , ಪೋಲಿಸ್ ಅಧಿಕಾರಿಗಳ ಹಾಗೂ ಸಿಬ್ಬಂದಿ 30 ಮಂದಿ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಸುಮಾರು 300 ಮಂದಿ ಪಾಲ್ಕೊಳುವ ಮೂಲಕ ಯಶಸ್ವಿ ಅಣಕು ಪ್ರದರ್ಶನ ಫಲಕಾರಿಯಾಯಿತು.