ದಕ್ಷಿಣ ಪದವೀಧರ ಚುನಾವಣೆ’ ಬಿಜೆಪಿಗೆ ಒಳ ಏಟಿನದ್ದೆ ಆತಂಕ!

1 min read

ದಕ್ಷಿಣ ಪದವೀಧರ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದ್ದು ಮತದಾನಕ್ಕೆ ನಾಲ್ಕು ದಿನ ಮಾತ್ರ ಬಾಕಿ ಇದೆ. ಈ ಮಧ್ಯೆ ಮೂರು ಪ್ರಮುಖ ಪಕ್ಷಗಳು ಸೇರಿದಂತೆ ಪಕ್ಷೇತರರ ಅಬ್ಬರದ ಚುನಾವಣಾ ಪ್ರಚಾರ ನಡೆಯುತ್ತಿದೆ. ಈತನ್ ಮಧ್ಯೆ ಬಿಜೆಪಿ ಅಭ್ಯರ್ಥಿ ರವಿಶಂಕರ್ ಅವರ ಪರವಾಗಿ ಘಟಾನುಘಟಿ ನಾಯಕರೇ ಪ್ರಚಾರಕ್ಕೆ ಆಗಮಿಸಿ ಮತಬೇಟೆ ಆರಂಭಿಸಿದ್ದಾರೆ.

ಅದರಲ್ಲು ಪ್ರಮುಖವಾಗಿ ಸಿಎಂ ಬೊಮ್ಮಾಯಿ, ಸಚಿವರು, ವಿಜೇಂದ್ರ ಸೇರಿದಂತೆ ಪ್ರಮುಖ ಘಟಾನುಘಟಿ ನಾಯಕರ ಉಪಸ್ಥಿತಿ ಇದ್ದು ಖುದ್ದು ಪ್ರತಾಪ್ ಸಿಂಹ ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರಚಾರದ ಭರಾಟೆ ಜೋರಾಗಿದೆ.

ಆದರೆ ಇದೀಗಾ ಬಿಜೆಪಿಗೆ ಕಾಡ್ತಿರೋ ಭಯ ಏನಂದ್ರೆ ಪಕ್ಷೇತರ ಅಭ್ಯರ್ಥಿ ವಿನಯ್!

ಹೌದು ಬಿಜೆಪಿ ಅಭ್ಯರ್ಥಿ ಎನ್.ಎಸ್.ವಿನಯ್ ಇದೀಗಾ ಬಿಜೆಪಿಗೆ ಮಗ್ಗುಲ ಮುಳ್ಳಾಗಿದ್ದಾರೆ. ಕಾರಣ ಈಶ್ವರಪ್ಪನವರ ಆಪ್ತರಾಗಿದ್ದ ವಿನಯ್ ದಕ್ಷಿಣ ಪದವೀಧರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಇದೀಗಾ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇತ್ತ ಬಿಜೆಪಿ ನಾಯಕರು ವಿನಯ್ ನಮ್ಮ ಸದಸ್ಯನೇ ಅಲ್ಲ ಎನ್ನುತ್ತ ಪ್ರಚಾರ ಮಾಡುತ್ತಿದ್ದರೆ ಇತ್ತ ವಿನಯ್ ನಾನು ಕೂಡ ಬಿಜೆಪಿಯ ಪ್ರಾಥಮಿಕ ಸದಸ್ಯನಾಗಿದ್ದೇನೆ. ನಾನು ಕೂಡ ಬಿಜೆಪಿಯ ಕಾರ್ಯಕರ್ತ ಎನ್ನುತ್ತಿದ್ದಾರೆ. ಇದು ಬಿಜೆಪಿ ನಾಯಕರಿಗೆ ಹೊಸ ತಲೆಬಿಸಿಯನ್ನುಂಟು ಮಾಡಿದೆ.

ಈ ನಡುವೆ ವಿನಯ್ ಕೂಡ ತನ್ನದೇ ತಂಡ ಕಟ್ಟಿಕೊಂಡಿದ್ದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರಿಗೆ ಬೇಕಾದ ಅವಶ್ಯಕತೆಗಳನ್ನ ಈಡೇರಿಸುವ ವಿಶ್ವಾಸ ನೀಡಿದ್ದು ಸಾವಿರಾರು ಜನರಿಗೆ ಉಚಿತವಾಗಿ ಇನ್ಶುರೆನ್ಸ್‌ ಮಾಡಿಸಿಕೊಟ್ಟಿದ್ದಾರೆ. ಹೀಗಾಗಿ ವಿನಯ್ ನನ್ನ ಗೆಲುವು ಶಥಸಿದ್ದ ಎನ್ನುತ್ತಿದ್ದಾರೆ.

ಪ್ರಸನ್ನಗೌಡಗೆ ರೈತ ಸಂಘ ಎಎಪಿ ಬೆಂಬಲ- ಎಸ್‌ಡಿಪಿಐ ಕೂಡ ಸ್ಪರ್ಧೆ!

ಈ ನಡುವೆ ಪಕ್ಷೇತರ ಅಭ್ಯರ್ಥಿ ಪ್ರಸನ್ನಗೌಡರಿಗೆ ಎಎಪಿ ಮತ್ತು ರೈತ ಸಂಘ ಸಹಕಾರ ನೀಡಿದೆ. ಈತನ್ ಮಧ್ಯೆ ಎಸ್‌ಡಿಪಿಐ ಕೂಡ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ನಮಗೆ ಅಧಿಕಾರಕ್ಕೆ ತನ್ನಿ ಎಂದು ಮಾಡುತ್ತಿದೆ. ಅಲ್ಲದೆ ಅಭ್ಯರ್ಥಿ ರಫತ್ ಕೂಡ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಆದರೆ ಇವರೆಲ್ಲರಿಗಿಂತ ಬಿಜೆಪಿಗೆ ಇರುವ ಆತಂಕ ಮಾತ್ರ ವಿನಯ್ ಅನ್ನೋದು ಮಾತ್ರ ಸತ್ಯ. ಆದರೆ ವಿನಯ್ ಅಬ್ಬರದ ನಡುವೆ ಬಿಜೆಪಿ ಹೇಗೆ ಗೆಲುವಿನ ನಗೆ ಬೀರುತ್ತೆ? ಅದಕ್ಕಾಗಿ ಬಿಜೆಪಿ ಮಾಡಿಕೊಂಡ ಪ್ಲ್ಯಾನ್ ನಿಜಕ್ಕು ವರ್ಕ್ ಆಗುತ್ತಾ? ಅಥವಾ ಈ ಬಾರಿಯು ಬಿಜೆಪಿ ಮುದುಡುತ್ತ ಎಂಬುದನ್ನ ಕಾದು ನೋಡಬೇಕಿದೆ.

About Author

Leave a Reply

Your email address will not be published. Required fields are marked *